ಜನ್ಮದಿನದ ಸಂಭ್ರಮದಲ್ಲಿರುವ ‘ರಿಯಲ್ ಸ್ಟಾರ್’ ಉಪೇಂದ್ರ ಮತ್ತೆರಡುಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.ನಿಮಿಷಾಂಬ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಲಿರುವ ಪ್ಯಾನ್ ಇಂಡಿಯಾಚಿತ್ರಕ್ಕೆ ಬರೋಬರಿ ₹100 ಕೋಟಿ ಹೂಡಿಕೆ ಮಾಡಲಾಗುತ್ತಿದೆ.

ಈ ಅದ್ಧೂರಿ ಚಿತ್ರ 2021ರ ವರ್ಷಾರಂಭದಲ್ಲಿ ಸೆಟ್ಟೇರಲಿದ್ದು, ‘ಮಾಸ್ಟರ್ ಪೀಸ್’ ಚಿತ್ರ ಖ್ಯಾತಿಯ ಮಂಜು ಮಾಂಡವ್ಯ ಇದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.ಕಥೆ, ಚಿತ್ರಕಥೆ, ಸಂಭಾಷಣೆಯೂ ಇವರದೇ. ಉಪ್ಪಿ ನಾಯಕನಾಗಿ ನಟಿಸಲಿರುವ ಈ ಚಿತ್ರದ ಟೈಟಲ್ ಏನಿರಬಹುದು ಮತ್ತು ಈ ಚಿತ್ರದಲ್ಲಿ ಯಾರು ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಕುತೂಹಲ ಸದ್ಯಕ್ಕೆ ಮನೆಮಾಡಿದೆ. ಉಳಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ವಿವರಗಳನ್ನೂ ಸದ್ಯದಲ್ಲೇ ಸದ್ಯದಲ್ಲೇ ನೀಡುವುದಾಗಿ ಮಂಜು ಮಾಂಡವ್ಯ ತಿಳಿಸಿದ್ದಾರೆ.

ಚಿತ್ರದ ಕಥೆ ಕೇಳಿ ಇಷ್ಟಪಟ್ಟಿರುವ ಉಪ್ಪಿ, ಬರುವ ಜನವರಿಯಿಂದಲೇ ಸಿನಿಮಾ ಆರಂಭಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ನಿಮಿಷಾಂಬ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಣ್ಣಯ್ಯ ಚಂದ್ರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.‘ಅಣ್ಣಯ್ಯ’, ‘ಕರ್ಪೂರದಗೊಂಬೆ’, ‘ಏನೋ ಒಂಥರ’, ‘ಬಿಂದಾಸ್’, ‘ರನ್ನ’ ಚಿತ್ರಗಳಂತಹ ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರಕ್ಕೆ ನೀಡಿದ ನಿರ್ಮಾಪಕ ಎನ್ನುವ ಹೆಗ್ಗಳಿಕೆ ಅಣ್ಣಯ್ಯ ಚಂದ್ರು ಅವರದು.

ಹಾಗೆಯೇ ಶಶಾಂಕ್ ಸಿನಿಮಾಸ್ ಬ್ಯಾನರ್ನಡಿ ಬಹುಭಾಷೆಗಳಲ್ಲಿ ನಿರ್ಮಾಣವಾಗಲಿರುವ ಚಿತ್ರದಲ್ಲಿ ನಟಿಸಲು ಉಪೇಂದ್ರ ಒಪ್ಪಿಗೆ ನೀಡಿದ್ದಾರಂತೆ. ಈ ಚಿತ್ರವನ್ನು ಎ.ಶಶಾಂಕ್ ನಿರ್ದೇಶಿಸಲಿದ್ದು, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ಲುಕ್ ಸದ್ಯದಲ್ಲೇ ರಿವೀಲ್ ಮಾಡಲಾಗುವುದು ಎಂದಿದ್ದಾರೆ ನಿರ್ದೇಶಕ ಶಶಾಂಕ್.

ಸದ್ಯ ಉಪೇಂದ್ರ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ದ ವಿಶೇಷ ಪೋಸ್ಟರ್ವೊಂದನ್ನು ಚಿತ್ರತಂಡ ಉಪ್ಪಿ ಜನ್ಮದಿನದ ಕೊಡುಗೆಯಾಗಿ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.