ಬೆಂಗಳೂರು: ರಾಜ್ ಕಿರಣ್ ಜೆ.ನಿರ್ದೇಶನದ ‘1980’ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಾಲ್ಕೈದು ದಶಕಗಳ ಹಿಂದಿನ ರೆಟ್ರೊ ಲುಕ್ನಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಕಾಣಿಸಿಕೊಂಡಿದ್ದು, ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಪೂಜಶ್ರೀ ಪ್ರೊಡಕ್ಷನ್ ಮತ್ತು ನೇಸರ ಪ್ರೊಡಕ್ಷನ್ ಬ್ಯಾನರ್ನಡಿ ನಿರ್ಮಾಣವಾಗಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ಚಿತ್ರವು ಬಿಡುಗಡೆಯಾಗಲಿದೆ.

ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದ ಪ್ರಿಯಾಂಕ ಉಪೇಂದ್ರ, ‘ಲಾಕ್ಡೌನ್ ಬಳಿಕ ದೊರೆತ ಸಿನಿಮಾ ಇದು. ಕಥೆ ಕೇಳಿದ ತಕ್ಷಣ ಒಪ್ಪಿಕೊಂಡೆ. ಕಥೆಯು ಅಷ್ಟೇ ಅದ್ಭುತವಾಗಿದೆ. ಆರಂಭದಲ್ಲಿ ಚಿತ್ರೀಕರಣ ಹೇಗೆ ನಡೆಯುತ್ತದೆ ಎನ್ನುವ ಗೊಂದಲವಿತ್ತು. ಯಾವುದೇ ಸಮಸ್ಯೆ ಇಲ್ಲದೆ ಸಲೀಸಾಗಿ ಶನಿವಾರಸಂತೆಯಲ್ಲಿ ಚಿತ್ರೀಕರಣವನ್ನು ನಿರ್ದೇಶಕರು ಮುಗಿಸಿದ್ದಾರೆ. ಹೊಸ ತಂಡದ ಜೊತೆ ಕೆಲಸ ಮಾಡಿದ ಖುಷಿಯಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರ ನಿರ್ಮಾಣದ ವಿಚಾರದಲ್ಲಿ ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಬರವಣಿಗೆ ತುಂಬ ಮಹತ್ವದ್ದು. ಇಲ್ಲಿ ಬರವಣಿಗೆಯೂ ಚೆನ್ನಾಗಿದೆ’ ಎಂದರು.

ರಾಜ್ ಕಿರಣ್ ಜೆ. ನಿರ್ದೇಶನದ ಮೊದಲ ಚಿತ್ರ ಇದಾಗಿದೆ. ಈ ಕುರಿತು ಮಾತನಾಡಿದ ಅವರು, ‘ಶೀರ್ಷಿಕೆಯೇ ಹೇಳುವಂತೆ 1980ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಸೈಕಲಾಜಿಕಲ್ ಥ್ರಿಲ್ಲರ್ ಶೈಲಿ ಎನ್ನಬಹುದು. ಈ ಸಿನಿಮಾ ಸಿದ್ಧವಾಗಲು ನನ್ನ ಇಡೀ ತಂಡವು ಶ್ರಮಿಸಿದೆ’ ಎಂದರು.

ಪಾತ್ರವರ್ಗದಲ್ಲಿ ಶರಣ್ಯ ಶೆಟ್ಟಿ, ಶ್ರೀಧರ್, ಅರವಿಂದ್ ರಾವ್, ರಮೇಶ್ ಪಂಡಿತ್, ಶಂಕರ್ ಅಶ್ವತ್ಥ್, ಕಿಶೋರ್ ಕುಮಾರ್, ವಿಶಾಲ್ ಧೀರಜ್, ಧನುಷ್ ಗೌಡ, ಮಾಸ್ಟರ್ ಕೃತಿಕಾ, ಭಾನು ಪ್ರಿಯಾ ಇದ್ದಾರೆ. ಚಿತ್ರಕ್ಕೆ ಜೀವ ಆಂಟೋನಿ ಛಾಯಾಗ್ರಹಣ, ಚಿಂತನ್ ವಿಕಾಸ್ ಅವರ ಸಂಗೀತವಿದೆ. ನರೇಂದ್ರ ಬಾಬು ಸಂಭಾಷಣೆ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.