ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಬರೆದ ತೆಲುಗಿನ ‘ನೀಲಿ ನೀಲಿ ಆಕಾಶಂ’ ಹಾಡು

Last Updated 17 ಆಗಸ್ಟ್ 2020, 9:54 IST
ಅಕ್ಷರ ಗಾತ್ರ

ತೆಲುಗಿನ‘30 ರೋಜುಲೊ ಪ್ರೇಮಿಂಚಟಂ ಯಲಾ’ ಸಿನಿಮಾದ ‘ನೀಲಿ ನೀಲಿ ಆಕಾಶಂ’ ಹಾಡು ದಾಖಲೆ ಬರೆದಿದೆ. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಜನರು ವೀಕ್ಷಿಸಿದ ಹಾಡು ಎಂಬ ಖ್ಯಾತಿಗೆ ಭಾಜನವಾಗಿದೆ ಈ ಹಾಡು. ಹಾಡನ್ನು ಬರೋಬ್ಬರಿ 20 ಕೋಟಿ ಮಂದಿ ವೀಕ್ಷಿಸಿದ್ದಾರೆ.

ತೆಲುಗಿನ ಖ್ಯಾತ ನಿರೂಪಕ ಪ್ರದೀಪ್ ಮಾಚೀರಾಜು ಈ ಸಿನಿಮಾದ ಮೂಲಕ ಮೊದಲ ಬಾರಿಗೆ ನಾಯಕರಾಗಿದ್ದಾರೆ. ಬೆಂಗಳೂರು ಮೂಲದ ಅಮೃತಾ ಅಯ್ಯರ್ ಸಿನಿಮಾದಲ್ಲಿ ಪ್ರದೀಪ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಸಿನಿಮಾ ಬಿಡುಗಡೆಗೂ ಮೊದಲು 20ಕೋಟಿ ಮಂದಿ ವೀಕ್ಷಿಸಿದ್ದ ದಕ್ಷಿಣ ಭಾರತದ ಹಾಡು ಎಂಬ ದಾಖಲೆಗೆ ಭಾಜನವಾಗಿದೆ ನೀಲಿ ನೀಲಿ ಆಕಾಶಂ ಹಾಡು. ಇದಕ್ಕೆ 1ಕೋಟಿಗೂ ಅಧಿಕ ಮಂದಿ ಲೈಕ್ ನೀಡಿದ್ದಾರೆ.

ಚಂದ್ರಬೋಸ್ ಈ ಹಾಡಿಗೆ ಸುಂದರ ಸಾಲುಗಳನ್ನು ಪೋಣಿಸಿದ್ದಾರೆ. ಸಿದ್ ಶ್ರೀರಾಮ್ ಹಾಗೂ ಸುನೀತಾ ಕಂಠಸಿರಿಯಲ್ಲಿ ಈ ಹಾಡು ಅದ್ಭುತವಾಗಿ ಮೂಡಿಬಂದಿದೆ.

ಹಳ್ಳಿ ಸೊಡಗಿನ ದೃಶ್ಯಕಾವ್ಯದಲ್ಲಿ ಮೂಡಿಬಂದ ಈ ಹಾಡು ಕೇಳುಗರನ್ನು ಮತ್ತೆ ಮತ್ತೆ ಕೇಳಬೇಕು ಎನ್ನಿಸುವಂತೆ ಮಾಡಿರುವುದು ಸುಳ್ಳಲ್ಲ.ಮುನ್ನ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಥಿಯೇಟರ್ ರೀ ಓಪನ್‌ಗೆ ಕಾಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT