ಗುರುನಂದನ್ ಅಭಿನಯಿಸಿರುವ ‘ರಾಜು ಕನ್ನಡ ಮೀಡಿಯಂ’ ಚಿತ್ರ ಜನವರಿ 19ರಂದು ಬಿಡುಗಡೆಯಾಗುತ್ತಿದ್ದು, ಈ ಚಿತ್ರವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ತೆರೆಯ ಮೇಲೆ ತರಲು ನಿರ್ಮಾಪಕ ಕೆ.ಎ. ಸುರೇಶ್ ಯೋಜನೆ ಹಾಕಿಕೊಂಡಿದ್ದಾರಂತೆ!
ಕಿಚ್ಚ ಸುದೀಪ್ ಅವರು ಈ ಸಿನಿಮಾದಲ್ಲಿ ವಿಭಿನ್ನವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮಧ್ಯಂತರದ ನಂತರ ಸುದೀಪ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈವರೆಗೆ ದೊರೆತಿರುವ ಸುದ್ದಿ. ಸುದೀಪ್ ಅವರೇ ಈ ಚಿತ್ರದ ಪ್ರಧಾನ ಆಕರ್ಷಣೆಯಾಗಿ ಬಿಂಬಿತರಾಗಿದ್ದಾರೆ ಎನ್ನುವುದು ಚಿತ್ರತಂಡದ ಅಂಬೋಣ.
</p><p>ಗುರುನಂದನ್ ಅವರಿಗೆ ಜೋಡಿಯಾಗಿ ಅವಂತಿಕಾ ಶೆಟ್ಟಿ ಹಾಗೂ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ ಎಂಬುದಷ್ಟೇ ಬಹುತೇಕರಿಗೆ ಗೊತ್ತಿರುವ ವಿಷಯ. ಆದರೆ ಚಿತ್ರದಲ್ಲಿ ಮತ್ತೊಬ್ಬ ನಾಯಕಿಯೂ ಇದ್ದಾರೆ. ಅವರು ರಷ್ಯಾ ಮಾಡೆಲ್ ಏಂಜಲಿನಾ! ಏಂಜಲಿನಾ ಅಭಿನಯಿಸಿರುವ ಭಾಗಗಳ ಚಿತ್ರೀಕರಣವು ವಿದೇಶದಲ್ಲೇ ನಡೆದಿದೆಯಂತೆ.</p></p>