ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತ ಮಗಳು ಇರಾ ಖಾನ್ ತನ್ನ ಬಹುಕಾಲದ ಗೆಳೆಯ ನೂಪುರ್ ಶಿಖರೆ ಅವರೊಂದಿಗೆ ವಿವಾಹವಾಗಿದ್ದಾರೆ.
ಮುಂಬೈನಲ್ಲಿ ನಡೆದ ಸರಳ ವಿವಾಹ ಸಮಾರಂಭದಲ್ಲಿ ಅಮೀರ್ ಖಾನ್, ಎರಡನೇ ಪತ್ನಿ ಕಿರಣ್ ರಾವ್ ಸೇರಿದಂತೆ ಕುಟುಂಬದ ಹಲವರು ಸಾಕ್ಷಿಯಾಗಿದ್ದಾರೆ. ವೃತ್ತಿಯಲ್ಲಿ ಫಿಟ್ನೆಸ್ ಟ್ರೈನರ್ ಆಗಿರುವ ನೂಪುರ್ ಮದುವೆ ಸಮಾರಂಭಕ್ಕೂ ಅದೇ ಉಡುಪಿನಲ್ಲಿ ಬಂದು ಗಮನ ಸೆಳೆದಿದ್ದಾರೆ. ಅದೇ ಉಡುಪಿನಲ್ಲಿ ವಿವಾಹ ನೋಂದಣಿಗೂ ಸಹಿ ಮಾಡಿದ್ದಾರೆ.
ಸರಳ ವಿವಾಹ ಸಮಾರಂಭದ ನಂತರ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿ ವಿವಾಹ ಆರತಕ್ಷತೆ ನಡೆಯಲಿದೆ. ಚಿತ್ರರಂಗದ ಗಣ್ಯರಿಗಾಗಿಯೇ ಮುಂಬೈನಲ್ಲೂ ಆರತಕ್ಷತೆ ನಡೆಯಲಿದೆ ಎಂದು ವರದಿಯಾಗಿದೆ.