ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಶೋಗೆ ನನ್ನನ್ನು ಏಕೆ ಆಹ್ವಾನಿಸಿಲ್ಲ? ಕಪಿಲ್ ಶರ್ಮಾಗೆ ಅಮೀರ್ ಖಾನ್ ಪ್ರಶ್ನೆ

Published 31 ಮೇ 2023, 10:15 IST
Last Updated 31 ಮೇ 2023, 10:15 IST
ಅಕ್ಷರ ಗಾತ್ರ

ಬಾಲಿವುಡ್ ಚಿತ್ರರಂಗದ ಜನಪ್ರಿಯ ನಟ ಅಮೀರ್ ಖಾನ್ ತಮ್ಮ ಮುಂದಿನ ಚಿತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ವಿಭಿನ್ನ ಕಥಾಹಂದರ ಚಿತ್ರಗಳ‌ನ್ನು ನೀಡಿರುವ ಅಮೀರ್ ಬಾಲಿವುಡ್‌ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪ್ರತಿಯೊಂದು ಪಾತ್ರದಲ್ಲಿಯೂ ವೈಶಿಷ್ಟ್ಯತೆಯನ್ನು ಹುಡುಕುವ ಅಮೀರ್ ಖಾನ್‌ ಅವರ ಚಿತ್ರ ತೆರೆಗೆ ಬರುವುದನ್ನೇ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಇದೀಗ ಅಮೀರ್‌ ಖಾನ್‌ ಅವರು ಜನಪ್ರಿಯ ನಿರೂಪಕ ಕಪಿಲ್ ಶರ್ಮಾ ಅವರ ವಿರುದ್ಧವೇ ಕಂಪ್ಲೇಂಟ್‌ ಮಾಡಿದ್ದಾರೆ!

ಪಂಜಾಬಿ ಭಾಷೆಯ ‘ಕ್ಯಾರಿ ಆನ್‌ ಜಟ್ಟಾ–3‘ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಅಮೀರ್ ಖಾನ್‌ ಮತ್ತು ಕಪಿಲ್‌ ಶರ್ಮಾ ಭಾಗವಹಿಸಿದ್ದರು. ಈ ವೇಳೆ ಇಬ್ಬರು ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ಕಪಿಲ್‌ ಶರ್ಮಾ ಅವರು ತಮ್ಮ ಜನಪ್ರಿಯ ಮನರಂಜನಾ ಕಾರ್ಯಕ್ರಮ ‘ದಿ ಕಪಿಲ್‌ ಶರ್ಮಾ‘ ಶೋಗೆ ಅತಿಥಿಯಾಗಿ ತಮ್ಮನ್ನು ಆಹ್ವಾನಿಸದೇ ಇರುವುದರ ಬಗ್ಗೆ ಅಮೀರ್ ಖಾನ್‌, ಕಪಿಲ್‌ ಅವರಲ್ಲಿ ಸ್ಪಷ್ಟನೆ ಕೇಳಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ನಾನು ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ಪ್ರತಿ ರಾತ್ರಿ ಮಲಗುವ ಮುನ್ನ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತೇನೆ. ಕೆಲವು ತಿಂಗಳಿಂದ ಕಪಿಲ್ ಶರ್ಮಾ ಶೋ ವೀಕ್ಷಿಸುತ್ತಿದ್ದು, ಶೋ ನೋಡುತ್ತಾ ನೋಡುತ್ತಾ ಕಪಿಲ್ ಅವರ ಅಭಿಮಾನಿಯಾಗಿದ್ದೇನೆ. ಅವರ ನಗಿಸುವ ಕಾಯಕವನ್ನು ಮೆಚ್ಚಿ ಅವರಿಗೆ ಪೋನ್ ಮಾಡಿ ಪ್ರಶಂಸೆ ನೀಡಿದ್ದೇನೆ. ಇಷ್ಟಾದರೂ ಕಾರ್ಯಕ್ರಮದ ಅತಿಥಿಯಾಗಿ ನನ್ನನ್ನು ಏಕೆ ಆಹ್ವಾನಿಸಲಿಲ್ಲ?‘ ಎಂದು ಅಮೀರ್ ಖಾನ್‌ ಕಪಿಲ್ ಶರ್ಮಾ ಅವರಿಗೆ ನೇರವಾಗಿ ಕೇಳಿದ್ದಾರೆ.

ಅಮೀರ್ ಖಾನ್ ಪ್ರಶ್ನೆಗೆ ತಬ್ಬಿಬ್ಬಾದ ಕಪಿಲ್ ಶರ್ಮಾ ಬಳಿಕ ಕಾರ್ಯಕ್ರಮಕ್ಕೆ ಆಹ್ವಾನಿಸದ ಹಿಂದಿರುವ ಕಾರಣವನ್ನು ತಿಳಿಸಿದ್ದಾರೆ. ‘ನೀವು ನಮ್ಮ ಶೋಗೆ ಬಂದರೆ ಅದು ನಮ್ಮ ಸೌಭಾಗ್ಯವಾಗಿದೆ. ಹಿಂದೆ ನಾನು ನಿಮ್ಮನ್ನು ಭೇಟಿಯಾಗಿದ್ದಾಗ ನಿಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಆಗ ನೀವು ಬೇರೆ ಕಡೆ ಹೋಗುತ್ತಿರುವುದಾಗಿಯೂ, ಅಲ್ಲಿಂದ ಬಂದ ನಂತರ ಭೇಟಿಯಾಗುವುದಾಗಿಯೂ ತಿಳಿಸಿದ್ದೀರಿ. ಅದಾದ ಮೂರು ವರ್ಷಗಳ ನಂತರವೇ ನಿಮ್ಮನ್ನು ನಾನು ನೇರವಾಗಿ ಭೇಟಿಯಾಗಿರುವುದು‘ ಎಂದು ಹೇಳಿ ಎಲ್ಲರನ್ನು ನಗೆಗಡಲಲಲ್ಲಿ ತೇಲಿಸಿದರು.

ಅಮೀರ್ ಖಾನ್ ಮತ್ತು ಕಪಿಲ್ ಶರ್ಮಾ ಅವರ ನಡುವಿನ ಸಂಭಾಷಣೆ ಕೇಳಿ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ನಿಮ್ಮಿಬ್ಬರನ್ನು ಒಟ್ಟಿಗೆ ನೋಡಲು ಕಾತರದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT