ಭಾನುವಾರ, ಜೂನ್ 26, 2022
26 °C

ಅಭಿಷೇಕ್‌ ಅಂಬರೀಶ್‌ ಹೊಸ ಸಿನಿಮಾ ‘ಕಾಳಿ’ ಫಸ್ಟ್‌ಲುಕ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ, ದಿವಂಗತ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ 70ನೇ ಜನ್ಮದಿನದ ಸಂದರ್ಭದಲ್ಲೇ ನಟ ಅಭಿಷೇಕ್‌ ಅಂಬರೀಶ್‌ ಅವರ ಹೊಸ ಚಿತ್ರ ‘ಕಾಳಿ’ಯ ಫಸ್ಟ್‌ಲುಕ್‌ ರಿಲೀಸ್‌ ಆಗಿದೆ. ‘ಗಜಕೇಸರಿ’, ‘ಹೆಬ್ಬುಲಿ’, ‘ಪೈಲ್ವಾನ್‌’ ಚಿತ್ರಗಳನ್ನು ನಿರ್ದೇಶಿಸಿದ್ದ ಕೃಷ್ಣ ಅವರು ಈ ಚಿತ್ರದಲ್ಲಿ ಅಭಿಷೇಕ್‌ಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. 

ಸದ್ಯಕ್ಕೆ ಸೂರಿ ಅವರ ನಿರ್ದೇಶನದ ‘ಬ್ಯಾಡ್‌ ಮ್ಯಾನರ್ಸ್‌’ ಸಿನಿಮಾ ಚಿತ್ರೀಕರಣದಲ್ಲಿ ಅಭಿಷೇಕ್‌ ತೊಡಗಿಸಿಕೊಂಡಿದ್ದಾರೆ. ಇದು ಅಂತಿಮ ಹಂತದಲ್ಲಿದೆ. ಕಂಠೀರವ ಸ್ಟುಡಿಯೊದಲ್ಲಿರುವ ಅಂಬರೀಶ್‌ ಅವರ ಸಮಾಧಿಗೆ ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದ ಅಭಿಷೇಕ್‌, ‘ಅಂಬರೀಶ್‌ ಅವರು ಇನ್ನೂ ಜೀವಂತವಾಗಿದ್ದಾರೆ ಅನ್ನುವ ರೀತಿಯೇ ಅಭಿಮಾನಿಗಳು ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಈ ಅಭಿಮಾನ ಹೀಗೆಯೇ ಇರಲಿ. ಅಂಥ ಪ್ರೀತಿಯನ್ನು ಅಂಬರೀಶ್‌ ಅವರು ಸಂಪಾದಿಸಿದ್ದಾರೆ. ನಮ್ಮನ್ನು ಅವರು ಅಗಲಿ ನಾಲ್ಕು ವರ್ಷವಾಯಿತು. ಆದರೆ ನಮಗೆ ಇನ್ನೂ ಅವರು ಶಕ್ತಿಯಾಗಿದ್ದಾರೆ. ಇಂದು ಕೃಷ್ಣ ಅವರು ನಿರ್ದೇಶಿಸಿರುವ ‘ಕಾಳಿ’ ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿದೆ. ಬ್ಯಾಡ್‌ಮ್ಯಾನರ್ಸ್‌ ಸಿನಿಮಾದ ಚಿತ್ರೀಕರಣ ಇನ್ನೂ ನಡೆಯುತ್ತಿದೆ. ಇದು ಮುಗಿಸಿದ ಕೂಡಲೇ ಕಾಳಿ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದಿದ್ದಾರೆ. 

ಅಭಿಷೇಕ್‌ ರಾಜಕೀಯಕ್ಕೆ ಇಳಿಯುತ್ತಾರೋ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್‌, ‘ಮೊದಲು ಬ್ಯಾಡ್‌ಮ್ಯಾನರ್ಸ್‌ ನಂತರ ಕಾಳಿ..ಉಳಿದದ್ದು ಆಮೇಲೆ ಮಾತನಾಡೋಣ’ ಎಂದಿದ್ದಾರೆ.

ಓದಿ... ಅಂಬರೀಶ್‌ ಎಂದರೆ ಆಕಾಶದ ಒಡೆಯ: ಅಂಬಿ ನೆನಪಿನಲ್ಲಿ ಸುಮಲತಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು