ಬುಧವಾರ, ಮಾರ್ಚ್ 3, 2021
30 °C

‘ಆಚಾರ್ಯ ಶ್ರೀ ಶಂಕರ’ ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡ ಮತ್ತು ಸಂಸ್ಕೃತದಲ್ಲಿ ನಿರ್ಮಾಣವಾಗಿರುವ ‘ಆಚಾರ್ಯ ಶ್ರೀ ಶಂಕರ’ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ‘ಯು’ ಪ್ರಮಾಣ ಪತ್ರ ನೀಡಿದೆ.

ಈ ಚಿತ್ರವನ್ನು ರಾಜಾ ರವಿಶಂಕರ್‌ ನಿರ್ದೇಶಿಸಿದ್ದಾರೆ. ರವಿಶಂಕರ್‌ ಉಪೇಂದ್ರ ಅಭಿನಯದ ‘ಶ್ರೀಮತಿ’, ‘ಅಷ್ಟಾವಕ್ರ’ ಹಾಗೂ ‘ಭಗವದ್ ಶ್ರೀರಾಮಾನುಜಾಚಾರ್ಯ’ ಚಿತ್ರಗಳನ್ನು ನಿರ್ದೇಶಿಸಿದ್ದವರು.

ಶ್ರೀಶಂಕರಚಾರ್ಯರ ಪಾತ್ರದಲ್ಲಿ ರವೀಂದ್ರ ಭಾಗವತ್, ಇನ್ನುಳಿದ ಪಾತ್ರಗಳಲ್ಲಿ ರಾಮಕೃಷ್ಣ, ಪ್ರಥಮಪ್ರಸಾದ್, ವಿನಯಪ್ರಸಾದ್,̧ ಸಾಯಿಪ್ರಕಾಶ್, ಭರತ್‌ ಕಲ್ಯಾಣ್‌, ಮೂಗು ̧ಸುರೇಶ್‌, ಮೈಕೋಮಂಜು, ತೇಜಸ್ವಿನಿ, ಸುರೇಖ, ಮಾಸ್ಟರ್‌ ಲಿಖಿತ್‌ ಶರ್ಮ, ಮಾಸ್ಟರ್‌ ರೋಹಿತ್‍ಶರ್ಮ ನಟಿಸಿದ್ದಾರೆ.

ಡಾ. ಆರೂಢ ಸ್ವಾಮೀಜಿ ಈ ಚಿತ್ರದ ಸಂಸ್ಕೃತ ಅವತರಣಿಕೆಗೆ ಸಂಭಾಷಣೆ ರಚಿಸಿ, ವ್ಯಾಷ ಮಹರ್ಷಿಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವೃತ್ತಿಯಲ್ಲಿ ಲೆಕ್ಕಪರಿಶೋಧಕರಾದ ವೈ.ಎನ್.ಶರ್ಮ ಮತ್ತು ವಿಜಯಲಕ್ಷ್ಮಿ ಅವರು ಯಮ್ಮನೂರು ಕ್ರಿಯೇಷನ್ಸ್ ಲಾಂಛನದಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಛಾಯಾಗ್ರಹಣ ಸಿ. ನಾರಾಯಣ, ಸಂಗೀತ ಅರ್ಜುನ್ ಜನ್ಯ, ಸಂಕಲನ ಆರ್.ದೊರೈರಾಜ್‌, ಪ್ರಸಾಧನ ಕುಮಾರ್ ನೊಣವಿನಕೆರೆ, ವಸ್ತ್ರಾಲಂಕಾರ ಕೆ. ಚಂದ್ರಚಾರಿ, ಕಲಾ ನಿರ್ದೇಶನ ಕುಮಾರ್(ಎನ್.ಕೆ) ಸಹ ನಿರ್ದೇಶನ ಎಂ.ಜಿ. ಜಗದೀಶ್ ಅವರದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು