ಶುಕ್ರವಾರ, ಜನವರಿ 24, 2020
27 °C

ಮೈನಾ ಹುಡುಗನ ಜೊತೆಯಾದ ಮೇಘಾ: ಪ್ರೀತಿಸಿದ ಹು‍ಡುಗಿಯೊಂದಿಗೆ ಚೇತನ್‌ ವಿವಾಹ ನಿಶ್ಚಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆ ದಿನಗಳು ಮತ್ತು ಮೈನಾ ಸಿನಿಮಾ ಖ್ಯಾತಿಯ ನಟ ಚೇತನ್‌ ವಿವಾಹ ನಿಶ್ಚಯವಾಗಿದ್ದು ಬರುವ ಫೆಬ್ರುವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ಮೇಘಾ ಎಸ್.‌ಅವರೊಂದಿಗೆ ಸರಳವಾಗಿ ವಿವಾಹವಾಗಲಿದ್ದಾರೆ. ಈ ಬಗ್ಗೆ ಚೇತನ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ. 

ಕಲ್ಲರ್ಫುಲ್! ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಚೇತನ್‌, ಮೇಘಾ ಅವರೊಂದಿಗಿರುವ ಫೋಟೊವನ್ನು ಹಾಕಿದ್ದಾರೆ. 

ಚೇತನ್‌ ಮತ್ತು ಮೇಘಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮೇಘಾ ಉತ್ತರ ಭಾರತ ಮೂಲದವರು. ಅನಾಥಶ್ರಮವೊಂದರಲ್ಲಿ ಸರಳವಾಗಿ ವಿವಾಹವಾಗಲಿದ್ದಾರೆ ಎನ್ನಲಾಗಿದ್ದು ಅಭಿಮಾನಿಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ. 

2007ರಲ್ಲಿ ಆ ದಿನಗಳು ಸಿನಿಮಾದ ಮೂಲಕ ಚೇತನ್‌ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮೊದಲ ಚಿತ್ರದಲ್ಲೇ ಚೇತನ್‌ ಭರವಸೆ ಮೂಡಿಸಿದ್ದರು. ಸಿನಿಮಾದ ಜೊತೆ ಜೊತೆಗೆ ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು