ಮಂಗಳವಾರ, ಫೆಬ್ರವರಿ 18, 2020
29 °C

ಫೆ. 2ರಂದು ಅನಾಥಾಶ್ರಮದಲ್ಲಿ ನಟ ಚೇತನ್‌ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆ ದಿನಗಳು ಮತ್ತು ಮೈನಾ ಸಿನಿಮಾ ಖ್ಯಾತಿಯ ನಟ ಚೇತನ್‌ ವಿವಾಹ ನಿಶ್ಚಯವಾಗಿರುವುದು ಗೊತ್ತಿರುವ ಸಂಗತಿ. ಇದೀಗ ಅವರ ವಿವಾಹದ ದಿನಾಂಕ ನಿಗದಿಯಾಗಿದೆ. 

ಇದನ್ನೂ ಓದಿ: ಮೈನಾ ಹುಡುಗನ ಜೊತೆಯಾದ ಮೇಘಾ: ಪ್ರೀತಿಸಿದ ಹು‍ಡುಗಿಯೊಂದಿಗೆ ಚೇತನ್‌ ವಿವಾಹ ನಿಶ್ಚಯ

ಬರುವ ಫೆಬ್ರುವರಿ 2ರ ಭಾನುವಾರ ಸಂಜೆ ನಟ ಚೇತನ್‌ ಹಾಗೂ ಮೇಘಾ ಎಸ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.  ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ಮೇಘಾ ಮತ್ತು ಚೇತನ್‌ ಪರಸ್ಪರ ಪ್ರೀತಿಸುತ್ತಿದ್ದರು. 

ಅನಾಥಶ್ರಮವೊಂದರಲ್ಲಿ ಸರಳವಾಗಿ ವಿವಾಹವಾಗಲಿದ್ದಾರೆ ಎಂದು ಚೇತನ್‌ ಆಪ್ತರು ತಿಳಿಸಿದ್ದಾರೆ. ಸರಳ ಮದುವೆ ಸಮಾರಂಭದಲ್ಲಿ ವಚನ ಗಾಯನ, ಸೂಫಿ ಗಾಯನ ಸೇರಿದಂತೆ ದೇಶಿ ನೃತ್ಯಗಳ ಕಾರ್ಯಕ್ರಮಗಳು ಇರಲಿವೆ. 

ಈಗಾಗಲೇ ಚೇತನ್‌ ಕನ್ನಡ ಸಿನಿಮಾರಂಗದ ಗಣ್ಯರನ್ನು ಮದುವೆಗೆ ಆಮಂತ್ರಣ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಆಮಂತ್ರಣ ನೀಡಿರುವ ಬಗ್ಗೆ ಚೇತನ್‌ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ. 

2007ರಲ್ಲಿ ಆ ದಿನಗಳು ಸಿನಿಮಾದ ಮೂಲಕ ಚೇತನ್‌ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮೊದಲ ಚಿತ್ರದಲ್ಲೇ ಚೇತನ್‌ ಭರವಸೆ ಮೂಡಿಸಿದ್ದರು. ಸಿನಿಮಾದ ಜೊತೆ ಜೊತೆಗೆ ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು