ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಗಳನ್ನು ದತ್ತು ಪಡೆಯಲು ನಟ ದರ್ಶನ್‌ ಕರೆ

Last Updated 5 ಜೂನ್ 2021, 11:31 IST
ಅಕ್ಷರ ಗಾತ್ರ

ಬೆಂಗಳೂರು: ಅರಣ್ಯ ಇಲಾಖೆ ರಾಯಭಾರಿಯಾಗಿರುವ ನಟ ದರ್ಶನ್‌ ಅವರಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಈಗಾಗಲೇ ಮೈಸೂರು ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ಪಡೆದಿರುವ ದರ್ಶನ್‌, ಕೋವಿಡ್‌ನ ಈ ಸಂಕಷ್ಟದ ಸಂದರ್ಭದಲ್ಲಿ ಜನರೂ ತಮ್ಮ ಹತ್ತಿರದ ಮೃಗಾಲಯಗಳಲ್ಲಿ ಇರುವ ಪ್ರಾಣಿಗಳನ್ನು ದತ್ತುಪಡೆಯಲು ಕರೆ ನೀಡಿದ್ದಾರೆ.

‘ಕೋವಿಡ್‌ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿಸಂಕುಲಕ್ಕೂ ಆಗಿದೆ. ಕರ್ನಾಟಕದಕ್ಕು 9 ಮೃಗಾಲಯಗಳಿದ್ದು, ಇವುಗಳಲ್ಲಿ 5 ಸಾವಿರ ಪ್ರಾಣಿಗಳಿವೆ. ಇವುಗಳನ್ನು ನೋಡಲು ದೇಶದಾದ್ಯಂತದಿಂದ ಜನರು ಬರುತ್ತಿದ್ದರು. ಅವರು ಪಡೆಯುತ್ತಿದ್ದ ಟಿಕೆಟ್‌ನಿಂದ ಸಂಗ್ರಹವಾಗುತ್ತಿದ್ದ ಹಣದಿಂದ ಈ ಪ್ರಾಣಿಗಳಿಗೆ ಆಹಾರ, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ವೇತನ ನೀಡಲಾಗುತ್ತಿತ್ತು. ಕೋವಿಡ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಈ ಮೃಗಾಲಯಗಳು ಸಂಕಷ್ಟದಲ್ಲಿವೆ.

ಜನರು ಈ ಪ್ರಾಣಿಗಳನ್ನು ದತ್ತು ಪಡೆಯಬಹುದು. ಒಂದು ಲವ್‌ಬರ್ಡ್‌ಗೆ ವರ್ಷಕ್ಕೆ ₹1 ಸಾವಿರ, ಹುಲಿಗೆ ₹1 ಲಕ್ಷ ಹಾಗೂ ಆನೆಗೆ ₹1.17 ಲಕ್ಷ ನೀಡಿ ದತ್ತುಪಡೆದು ಪ್ರಾಣಿಸಂಕುಲ ಉಳಿಸಲು, ಮೃಗಾಲಯ ಬೆಳೆಸಲು ಎಲ್ಲರೂ ಕೈಜೋಡಿಸಿ. ‘zoo of karnataka’ ಆ್ಯಪ್‌ ಮುಖಾಂತರ ಅಥವಾ ಮೃಗಾಲಯಗಳಿಗೇ ಭೇಟಿ ನೀಡಿ ಈ ದತ್ತು ಪಡೆಯುವ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯಬಹುದು. ಈ ಒಳ್ಳೆಯ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ’ ಎಂದು ದರ್ಶನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT