ಗುರುವಾರ , ಅಕ್ಟೋಬರ್ 21, 2021
29 °C

ಇಂಟರನೆಟ್‌ನಲ್ಲಿ ಇಮ್ರಾನ್ ಹಶ್ಮಿ ವರ್ಕೌಟ್ ವಿಡಿಯೊ ವೈರಲ್ : ಟೈಗರ್ 3ಗೆ ತಯಾರಿ?

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್ ನಟ ಇಮ್ರಾನ್ ಹಶ್ಮಿ ಕೊರೊನಾ ಲಾಕ್‌ಡೌನ್ ಬಳಿಕ ಸುದ್ದಿಯಲ್ಲಿರಲಿಲ್ಲ. ಸಿನಿಮಾ ಹೊರತುಪಡಿಸಿ ಅವರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. 

ಇದೀಗ ಮರಳಿ ಬಂದಿರುವ ಇಮ್ರಾನ್ ಹಶ್ಮಿ ಇನ್‌ಸ್ಟಾಗ್ರಾಂನಲ್ಲಿ ಇಂಟರ್‌ನೆಟ್‌ನಲ್ಲಿ ಗಮನ ಸೆಳೆದಿದ್ದಾರೆ. ವರ್ಕ್ಔಟ್ ವಿಡಿಯೊ ಶೇರ್ ಮಾಡಿಕೊಂಡಿರುವ ಅವರು, ದೇಹವನ್ನು ಸಕತ್ ಆಗಿ ದಂಡಿಸಿ, ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.

Dear Fat, prepare to die !!! ಎಂದು ಒಕ್ಕಣಿಕೆ ಸೇರಿಸಿರುವ ಇಮ್ರಾನ್ ಹಶ್ಮಿ ಜಿಮ್‌ನಲ್ಲಿ ಬೆವರಿಳಿಸುತ್ತಿರುವುದರ ಹಿಂದೆ ಏನೋ ಹೊಸ ಯೋಜನೆ ಇದೆ ಎಂಬುದನ್ನು ಸೂಚ್ಯವಾಗಿ ತೋರಿಸಿದ್ದಾರೆ.

3 ಮಿಲಿಯನ್ ಫಾಲೋವರ್ಸ್ ಹೊಂದಿರುವ 42 ವರ್ಷದ ಈ ನಟ ಬಾಲಿವುಡ್‌ನ ಸಕತ್ ಸ್ಟೈಲಿಶ್ ನಟ ಎಂದು ಅಭಿಮಾನಿಗಳಿಂದ ಕರೆಯಿಸಿಕೊಳ್ಳುತ್ತಾರೆ. ತಾನು ಏತಕ್ಕಾಗಿ ದೇಹ ದಂಡಿಸುತ್ತಿದ್ದೇನೆ ಎಂಬುದರ ಗುಟ್ಟು ಬಿಟ್ಟು ಕೊಡದಿದ್ದರೂ ಅಭಿಮಾನಿಗಳು ಇದು ಟೈಗರ್ 3 ಸಿನಿಮಾಕ್ಕಾಗಿ ನಡೆಸುತ್ತಿರುವ ಕಸರತ್ತು ಎಂದು ಬಹುತೇಕರು ಕಾಮೆಂಟ್ ಮಾಡಿದ್ದಾರೆ.

 

ಸಲ್ಮಾನ್ ಖಾನ್ ಹಾಗೂ ಕತ್ರಿಕಾ ಕೈಫ್ ಅಭಿನಯದ ‘ಟೈಗರ್ 3’ ಸಿನಿಮಾ ನಿರ್ಮಾಣ ಹಂತದಲ್ಲಿದ್ದು ಅದರಲ್ಲಿ ಇಮ್ರಾನ್ ಪಾಕಿಸ್ತಾನ್ ಐಎಸ್‌ಐ ಏಜೆಂಟ್ ಆಗಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ.

ಉಳಿದಂತೆ ಇಮ್ರಾನ್ ಹಶ್ಮಿ, ‘ರಾಜ್ 3’ ಹಾಗೂ ‘ಇಜ್ರಾ’ ಎಂಬ ಹಾರರ್ ಥ್ರಿಲ್ಲರ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ನೀನು ಅಷ್ಟೊಂದು ಸೆಕ್ಸಿ ಹೇಗೆ? ಎಂದ ಅರ್ಜುನ್ ಕಪೂರ್‌ಗೆ ರಣವೀರ್ ಕೊಟ್ಟ ಉತ್ತರ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು