ಶನಿವಾರ, ಅಕ್ಟೋಬರ್ 23, 2021
20 °C

ಆರ್ಯನ್ ಖಾನ್‌ಗೆ ಸಮಾಧಾನದ ನುಡಿ ಹೇಳಿ ಇನ್ಸ್ಟಾ ಪೋಸ್ಟ್‌ ಹಾಕಿದ ನಟ ಹೃತಿಕ್ ರೋಷನ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬಳಿಕ ಬಾಲಿವುಡ್ ಮಂದಿ ಸೇರಿದಂತೆ ಶಾರುಕ್ ಅಭಿಮಾನಿಗಳು ಆರ್ಯನ್ ಪರ ನಿಂತಿದ್ದಾರೆ.

ಇದೀಗ ‘ಗಾಡ್ ಆಫ್ ಗ್ರೀಕ್ ’ಎಂಬ ಬಿರುದು ಹೊಂದಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಆರ್ಯನ್ ಖಾನ್ ಬೆಂಬಲಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಪ್ರೀತಿಯ ಸಾಲುಗಳ ಜೊತೆಗೆ ಆರ್ಯನ್ ಖಾನ್‌ಗೆ ಈ ಹೊತ್ತಿನಲ್ಲಿ ಪರಿಸ್ಥಿತಿ ಎದುರಿಸಿ ಮುಂದೆ ಬಾ ಎಂದು ಸಮಾಧಾನದ ನುಡಿಗಳನ್ನು ಆಡಿದ್ದಾರೆ.

‘ನನ್ನ ಪ್ರೀತಿಯ ಆರ್ಯನ್, ಜೀವನವು ಒಂದು ವಿಚಿತ್ರ ಪಯಣ. ಅದು ಅದ್ಭುತವಾಗಿದೆ. ಏಕೆಂದರೆ ಅದು ಅನಿಶ್ಚಿತೆಯಿಂದ ಕೂಡಿದೆ. ಆದರೆ, ದೇವರು ದಯೆ ತೋರುತ್ತಾನೆ. ಆ ಅನಿಶ್ಚಿತತೆಯ ನಡುವೆ ನೀವು ನಿಮ್ಮನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತಿರಿ ಎಂಬುದನ್ನು ದೇವರು ನೋಡುತ್ತಾನೆ'

‘ಕೋಪ, ಗೊಂದಲ ಇವು ನಿಮ್ಮೊಳಗಿನ ನಾಯಕನನ್ನು ಸುಡಲು ಬೇಕಾದವು. ಆದರೆ, ಜಾಗರೂಕವಾಗಿರು, ದಯೆ, ಸಹಾನುಭೂತಿ, ಪ್ರೀತಿ. ನಿನ್ನನ್ನು ಆವರಿಸಿಕೊಳ್ಳಲು ಅನುಮತಿಸು. ತಪ್ಪುಗಳು, ವೈಫಲ್ಯಗಳು, ಗೆಲುವುಗಳು, ಯಶಸ್ಸು, ಇದರಲ್ಲಿ ಯಾವುದನ್ನು ನಿನ್ನೊಂದಿಗೆ ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ಎಸೆಯಬೇಕು ಎಂದು ನಿನಗೆ ತಿಳಿದಿದ್ದರೆ ಅದು ಸಾರ್ಥಕ'

‘ನಾನು ನಿನ್ನನ್ನು ಚಿಕ್ಕವನಿದ್ದಾಗಲು ತಿಳಿದಿದ್ದೇನೆ ಮತ್ತು ನಾನು ನಿನ್ನನ್ನು ಒಬ್ಬ ಮನುಷ್ಯ ಎಂದು ತಿಳಿದಿದ್ದೇನೆ. ಹಾಗೇ ಇರು. ನೀನು ಬಯಸಿದ್ದನ್ನು ಅನುಭವಿಸು. ಆದರೆ, ಎಚ್ಚರದಿಂದ ಇರು. ನನ್ನನ್ನು ನಂಬು, ನಾನು ನಿನಗೆ ಭರವಸೆ ನೀಡುತ್ತೇನೆ. ಮನಸ್ಸಿನ ಭೂತದ ವಿರುದ್ಧ ಶಾಂತತೆಯನ್ನು ಕಾಪಾಡಿಕೊಂಡಿದ್ದರೆ ಮಾತ್ರ ವಿಜಯ. ಶಾಂತವಾಗಿರು, ನಿನಗೆ ಮುಂದೆ ಮಹಾ ಬೆಳಕು ಇದೆ. ಆದರೆ ಅದಕ್ಕಾಗಿ, ನೀನು ಕತ್ತಲೆಯ ಮೂಲಕ ಹೋಗಬೇಕು. ನಿನ್ನನ್ನು ಪ್ರೀತಿಸುತ್ತೇನೆ ಆರ್ಯನ್' ಎಂದು ಆರ್ಯನ್ ಕುರಿತು ಪೋಸ್ಟ್ ಹಾಕಿದ್ದಾರೆ.

 

ಸಾಮಾಜಿಕ ಮಾಧ್ಯಮಗಳಲ್ಲಿ 'We stand with #AryanKhan' ಎಂಬ ಅಭಿಯಾನ ಆರಂಭಿಸಿದ್ದಾರೆ. ಕೆಲವರು ಇದನ್ನೇ ‘ಡಿಪಿ’ಯಾಗಿ ಬಳಸಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ 'We stand with #AryanKhan' ಟ್ರೆಂಡ್‌ ಆಗಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನ ಶುರುವಾಗಿದೆ.

ಇದನ್ನೂ ಓದಿ: ಎನ್‌ಸಿಬಿ ದಾರಿ ತಪ್ಪಿಸುತ್ತಿದೆ– ಸಿಸಿಟಿವಿ ದೃಶ್ಯ ತೋರಿಸಲಿ: ಆರ್ಯನ್ ಸ್ನೇಹಿತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು