ಸೋಮವಾರ, ಅಕ್ಟೋಬರ್ 25, 2021
25 °C

'ನಾನಿ ಒಬ್ಬ ಪ್ರತಿಭಾವಂತ ಕಲಾವಿದ, ನನಗೆ ಪ್ರೇರಣೆ' ಎಂದ ಶಾಹಿದ್ ಕಪೂರ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರಿಕೆಟ್ ಕಥಾ ಹಂದರವುಳ್ಳ ತೆಲುಗಿನ ‘ಜೆರ್ಸಿ’ ಸಿನಿಮಾ 2019 ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಸೈಲೆಂಟ್ ಸ್ಟಾರ್ ನಾನಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು.

ಇದೀಗ ಬಾಲಿವುಡ್‌ನಲ್ಲಿ ಇದೇ ಸಿನಿಮಾ ‘ಜೆರ್ಸಿ’ ಹೆಸರಿನಲ್ಲೇ ರಿಮೇಕ್ ಆಗಿದ್ದು, ನಟ ಶಾಹಿದ್ ಕಪೂರ್ ನಾನಿ ಮಾಡಿದ್ದ ಪಾತ್ರ ಮಾಡಿದ್ದಾರೆ. ಟ್ವಿಟರ್‌ನಲ್ಲಿ ತಮ್ಮ ಈ ಸಿನಿಮಾದ ಬಗ್ಗೆ ಅಭಿಮಾನಿಗಳೊಂದಿಗೆ ಸಂಭಾಷಣೆ ನಡೆಸಿರುವ ಶಾಹಿದ್ ಕಪೂರ್ ನಾನಿ ಅವರನ್ನು ಹಾಡಿ ಹೊಗಳಿದ್ದಾರೆ.

‘ನಾನಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಅಭಿಮಾನಿಯೊಬ್ಬರು ಕೇಳಿದ್ದಕ್ಕೆ ಶಾಹಿದ್ ಕಪೂರ್, ‘ಹಿಂದಿಯಲ್ಲಿ ಜೆರ್ಸಿ ಸಿನಿಮಾ ಮಾಡಲು ನನಗೆ ನಾನಿಯೇ ಪ್ರೇರಣೆ. ಆ ಪಾತ್ರ ನೋಡಿ ನನ್ನ ಕಣ್ಣುಗಳು ತೇವಗೊಂಡಿದ್ದವು. ಅವರೊಬ್ಬ ಅದ್ಭುತ ಪ್ರತಿಭಾವಂತ ಕಲಾವಿದ‘ ಎಂದು ಹೇಳಿದ್ದಾರೆ.

ಶಾಹಿದ್ ಕಪೂರ್ ಮೃಣಾಲ್ ಠಾಕೂರ್, ಪಂಕಜ್ ಕಪೂರ್ ಅವರು ಹಿಂದಿಯ ಜೆರ್ಸಿಯಲ್ಲಿ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಇದು 2021 ಡಿಸೆಂಬರ್ 21 ಕ್ಕೆ ಬಿಡುಗಡೆಯಾಗಲಿದೆ. ತೆಲುಗು ಜೆರ್ಸಿಯಲ್ಲಿ ನಾನಿಗೆ ನಾಯಕಿಯಾಗಿ ಶೃದ್ಧಾ ಶ್ರೀನಾಥ್ ಅಭಿನಯಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು