ಶುಕ್ರವಾರ, ಜೂನ್ 18, 2021
24 °C

ತಮಿಳು ಹಾಸ್ಯ ನಟ ಪಾಂಡು ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮಿಳು ಚಿತ್ರರಂಗದ ಹಾಸ್ಯನಟ ಪಾಂಡು (74) ಅವರು ಗುರುವಾರ ಕೋವಿಡ್‌ನಿಂದಾಗಿ ನಿಧನರಾದರು.

ಪಾಂಡು ಹಾಗೂ ಅವರ ಪತ್ನಿ ಕುಮುದಾ ಅವರಿಗೆ ಇತ್ತೀಚೆಗೆ ಕೋವಿಡ್‌ ದೃಢಪಟ್ಟಿತ್ತು. ಅವರು ತಮ್ಮ ಸಹೋದರ ಇಡಿಚಪುಲಿ ಸೆಲ್ವರಾಜ್‌ ಅವರೊಂದಿಗೆ 1970ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇದಕ್ಕೂ ಮುನ್ನ ಅವರೊಬ್ಬ ಚಿತ್ರಕಲಾವಿದರಾಗಿದ್ದರು. ತಮಿಳುನಾಡಿನಲ್ಲಿ ಎಐಎಡಿಎಂಕೆಯ ಧ್ವಜವನ್ನು ವಿನ್ಯಾಸಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. 

ಎಂ.ಜಿ. ರಾಮಚಂದ್ರನ್‌., ಶಿವಾಜಿ ಗಣೇಶನ್‌, ಕಮಲ್‌ ಹಾಸನ್‌, ರಜನಿಕಾಂತ್‌ ಅವರೊಂದಿಗೆ ತೆರೆ ಹಂಚಿಕೊಂಡ ಹಿರಿಮೆ ಪಾಂಡು ಅವರದ್ದು. ಜನಪ್ರಿಯ ಪ್ರೇಮಕಥೆ ‘ಕಾದಲ್‌ ಕೊತ್ತೈ’ ಚಿತ್ರದಲ್ಲಿ ನಾಯಕ ಅಜಿತ್‌ ಪಾತ್ರಕ್ಕೆ ಸಂವಾದಿಯಾದ ಅಭಿನಯ ತೋರಿದ್ದರು. ಈ ಚಿತ್ರವು ಭರ್ಜರಿ ಯಶಸ್ಸು ಕಂಡು ಪಾಂಡು ಅವರು ಕಾಲಿವುಡ್‌ನಲ್ಲಿ ಮತ್ತಷ್ಟು ಭದ್ರವಾಗಿ ನೆಲೆಯೂರಲು ಕಾರಣವಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು