ಬೆಂಗಳೂರು: ಇಂದು(ಏ.24) ವರನಟ ರಾಜ್ಕುಮಾರ್ ಅವರ 96ನೇ ಜನ್ಮದಿನ. ಜನ್ಮದಿನದ ಅಂಗವಾಗಿ ನಟ ಶಿವರಾಜ್ಕುಮಾರ್ ದಂಪತಿ, ನಟ ರಾಘವೇಂದ್ರ ರಾಜ್ಕುಮಾರ್ ದಂಪತಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೊದಲ್ಲಿರುವ ರಾಜ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಸಾವಿರಾರು ಅಭಿಮಾನಿಗಳು ‘ಬಂಗಾರದ ಮನುಷ್ಯ’ನಿಗೆ ಪುಷ್ಪನಮನ ಅರ್ಪಿಸಿದರು.

‘ಅಪ್ಪಾಜಿ, ಅಮ್ಮ ಹಾಗೂ ಅಪ್ಪುವನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ. ಅಪ್ಪನ ಜನ್ಮದಿನದಂದೇ ಮಗಳ ಸಿನಿಮಾ ಬಿಡುಗಡೆಯಾಗಿದೆ. ಕಳೆದ ಫೆಬ್ರುವರಿಯಲ್ಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ನನಗೆ ಶಸ್ತ್ರಚಿಕಿತ್ಸೆಯ ಕಾರಣ ನಿವೇದಿತಾಳೂ ಅಮೆರಿಕಕ್ಕೆ ಬಂದಿದ್ದಳು. ಹೀಗಾಗಿ ಸಿನಿಮಾ ಮುಂದೂಡಲ್ಪಟ್ಟಿತ್ತು. ಇದೀಗ ಅಪ್ಪಾಜಿ ಜನ್ಮದಿನದಂದೇ ಸಿನಿಮಾ ಪ್ರೇಕ್ಷಕರ ಎದುರಿಗೆ ಬಂದಿದೆ. ನಾನು ಅಪ್ಪಾಜಿಗೆ ಉಡುಗೊರೆ ನೀಡಿರುವುದು ನೆನಪಾಗುತ್ತಿಲ್ಲ. ನನಗೆ ಜನ್ಮನೀಡಿರುವುದೇ ಅವರು ನನಗೆ ನೀಡಿರುವ ಉಡುಗೊರೆ. ‘ಗಂಧದಗುಡಿ’ ಸಿನಿಮಾವೂ ಮರುಬಿಡುಗಡೆಯಾಗಿದೆ. ಇಂತಹ ಸಿನಿಮಾಗಳು ಬರಬೇಕು’ ಎಂದರು ಶಿವರಾಜ್ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.