ಮಂಗಳವಾರ, ಜನವರಿ 18, 2022
23 °C

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾಗೆ ಜನ್ಮದಿನದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು (ನ.29) ‘ಸ್ಯಾಂಡಲ್‌ವುಡ್‌ ಕ್ವೀನ್‌’ ಎಂದೇ ಖ್ಯಾತಿ ಪಡೆದಿರುವ ನಟಿ, ಮಾಜಿ ಸಂಸದೆ ರಮ್ಯಾ ಅವರ ಜನ್ಮದಿನ. ಸದ್ಯ 39ನೇ ವರ್ಷಕ್ಕೆ ಕಾಲಿಟ್ಟಿರುವ ರಮ್ಯಾ ಅವರು ರಾಜಕೀಯಕ್ಕೆ ಇಳಿದ ಬಳಿಕ ನಟನೆಯಿಂದ ದೂರವೇ ಉಳಿದಿದ್ದಾರೆ. 

ಆದರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ರಮ್ಯಾ ಅಭಿಮಾನಿಗಳ ಜೊತೆ ತಮ್ಮ ಆಲೋಚನೆ, ದಿನಚರಿಯ ಬಗ್ಗೆ ಮಾಹಿತಿ ನೀಡುತ್ತಲೇ ಇರುತ್ತಿದ್ದರು. 

ರಮ್ಯಾ ಅವರ ಜನ್ಮದಿನದಂದು ರಕ್ಷಿತಾ, ಆಶಿಕಾ ರಂಗನಾಥ್‌, ನಿಧಿ ಸುಬ್ಬಯ್ಯ, ಶೀತಲ್‌ ಶೆಟ್ಟಿ, ಸಂಯುಕ್ತ ಹೊರನಾಡು ಸೇರಿದಂತೆ ಚಿತ್ರರಂಗದ ಪ್ರಮುಖರು ಹಾಗೂ ಸಾವಿರಾರು ಅಭಿಮಾನಿಗಳು ಅವರಿಗೆ ಶುಭಾಶಯ ಕೋರಿದ್ದಾರೆ. ಇದಕ್ಕೆಲ್ಲ ಪ್ರತಿಕ್ರಿಯೆ ನೀಡಿರುವ ರಮ್ಯಾ, ‘ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದ’ ಎಂದಿದ್ದಾರೆ. ನಟ ದಿವಂಗತ ಪುನೀತ್ ರಾಜ್‌ಕುಮಾರ್‌ ಅವರಿಗೆ ಜೋಡಿಯಾಗಿ 2003ರಲ್ಲಿ ‘ಅಭಿ’ ಸಿನಿಮಾ ಮುಖಾಂತರ ಚಿತ್ರರಂಗಕ್ಕೆ ರಮ್ಯಾ ಕಾಲಿಟ್ಟಿದ್ದರು. ಈ ಜೋಡಿ ಸಿನಿ ಪ್ರೇಕ್ಷಕರಲ್ಲಿ ಮೋಡಿ ಮಾಡಿತ್ತು. ಇದಾದ ಬಳಿಕ ಪುನೀತ್ ಅವರ ಜೊತೆ ಹಾಗೂ ಚಂದನವನದ ಖ್ಯಾತ ನಟರಿಗೆ ಸಾಲು ಸಾಲು ಚಿತ್ರಗಳಲ್ಲಿ ಜೋಡಿಯಾಗಿ ರಮ್ಯಾ ಕಾಣಿಸಿಕೊಂಡರು.

ಚಿತ್ರರಂಗದಲ್ಲಿ ಪಡೆದ ಖ್ಯಾತಿ ಅವರನ್ನು ರಾಜಕೀಯಕ್ಕೂ ಸೆಳೆದಿತ್ತು. ಮಂಡ್ಯ ಲೋಕಸಭೆಯ ಸಂಸದರಾಗಿಗೂ ರಮ್ಯಾ ಆಯ್ಕೆಯಾಗಿದ್ದರು.

ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳುವುದರಿದ್ದರೆ ಅದು ಪುನೀತ್‌ ರಾಜ್‌ಕುಮಾರ್‌ ಅವರ ಜೋಡಿಯಾಗಿಯೇ ಎಂದು ಕನಸು ಹೊತ್ತಿದ್ದ ರಮ್ಯಾ ಈ ಕುರಿತು ಇತ್ತೀಚೆಗೆ ಹೇಳಿಕೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು