ಬುಧವಾರ, ಮಾರ್ಚ್ 29, 2023
32 °C

ಮಾಸ್ ರಾಜಾ ರವಿ ತೇಜಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆಲುಗು ಮಾಸ್ ನಟ ರವಿ ತೇಜಾ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿದೆ. ಈ ವಿಚಾರವನ್ನು ಸ್ವತಃ ರವಿ ತೇಜಾ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಟೈಗರ್ ನಾಗೇಶ್ವರ್ ರಾವ್‘ ಎಂಬ ಹೆಸರಿನ ಪ್ಯಾನ್ ಇಂಡಿಯಾ ಚಿತ್ರ ಸೆಟ್ಟೆರಲಿದ್ದು, ಮೊದಲ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಾಗೇಶ್ವರ್ ರಾವ್ ಆಗಿ ರವಿ ತೇಜ ಅಭಿನಯಿಸುತ್ತಿದ್ದಾರೆ.

ಇದು ರವಿ ತೇಜಾ ಅವರ 71 ನೇ ಚಿತ್ರವಾಗಿದ್ದು ವಂಶಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ತೇಜ್ ನಾರಾಯಣ್ ಅಗರವಾಲ್ ಅವರು ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ.‌

 

70 ರ ದಶಕದಲ್ಲಿ ಆಂಧ್ರಪ್ರದೇಶ ಕಡಪಾ ಜಿಲ್ಲೆಯಲ್ಲಿ ಸದ್ದು ಮಾಡಿದ್ದ ಕುಖ್ಯಾತ ದರೋಡೆಕೋರ ನಾಗೇಶ್ವರ್ ರಾವ್ ಜೀವನಗಾಥೆಯನ್ನು ಇದು ಒಳಗೊಂಡಿದೆ ಎನ್ನಲಾಗಿದೆ. ನಾಗೇಶ್ವರ್ ರಾವ್ 1987 ರಲ್ಲಿ ಚೆನ್ನೈ ಜೈಲಿನಿಂದ ತಪ್ಪಿಸಿಕೊಂಡು ಬರುವಾಗ ಪೊಲೀಸರ ಗುಂಡಿಗೆ ಬಲಿಯಾಗಿದ್ದ.

ಇನ್ನು ಇತ್ತೀಚೆಗಷ್ಟೇ ರವಿ ತೇಜಾ ಅವರು ‘ಆರ್‌ಟಿ 70’ ಪ್ರೊಜೆಕ್ಟ್ ಘೋಷಣೆ ಮಾಡಿದ್ದರು. ಉಳಿದಂತೆ ‘ಖಿಲಾಡಿ’, ‘ರಮಾ ರಾವ್ ಆನ್ ಡುಟಿ’, ‘ಧಮಾಕಾ’ ಚಿತ್ರಗಳು ಬಿಡುಗಡೆಯಾಗಬೇಕಿದೆ.

ಇದನ್ನೂ ಓದಿ: ಜೈ ಭೀಮ್‌ ಸಿನಿಮಾದಲ್ಲಿ ಹಿಂದಿ ಭಾಷಾ ವಿವಾದದ ಕಿಡಿ ಹೊತ್ತಿಸಿದ ನಟ ಪ್ರಕಾಶ್ ರಾಜ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು