ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲೆಟ್ ಪ್ರೂಫ್ ಎಸ್‌ಯುವಿ ಕಾರು ಖರೀದಿಸಿದ ನಟ ಸಲ್ಮಾನ್ ಖಾನ್

Last Updated 7 ಏಪ್ರಿಲ್ 2023, 10:23 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸ್ವಯಂ ರಕ್ಷಣೆಗಾಗಿ ಬಂದೂಕು ಪರವಾನಗಿ ಪಡೆದುಕೊಂಡಿದ್ದಾರೆ, ಇದರ ಬೆನ್ನಲ್ಲೇ ಬುಲೆಟ್ ಪ್ರೂಫ್ ಎಸ್‌ಯುವಿ ಕಾರನ್ನೂ ಖರೀದಿಸಿದ್ದಾರೆ ಎಂದು ನಟನ ಆಪ್ತ ಮೂಲಗಳು ತಿಳಿಸಿವೆ.

ವೈ-ಪ್ಲಸ್ ಭದ್ರತೆಯನ್ನು ಪಡೆಯುತ್ತಿರುವ ಸಲ್ಮಾನ್ ಖಾನ್, ಮುಂಬೈ ಮತ್ತು ಸುತ್ತಮುತ್ತಲಿನ ಪ್ರಯಾಣಕ್ಕಾಗಿ ನಿಸಾನ್ ಎಸ್‌ಯುವಿ ಬುಲೆಟ್ ಪ್ರೂಫ್ ಪೆಟ್ರೋಲ್ ಕಾರನ್ನು ಆಮದು ಮಾಡಿಕೊಂಡಿದ್ದಾರೆ.

ಮಾಫಿಯಾ ಡಾನ್ ಲಾರೆನ್ಸ್ ಬಿಷ್ಣೋಯಿ ಅವರ ಗ್ಯಾಂಗ್‌ನಿಂದ ಸಲ್ಮಾನ್ ಖಾನ್ ಮತ್ತು ಅವರ ತಂದೆ ಹೆಸರಾಂತ ಬಾಲಿವುಡ್ ಬರಹಗಾರ ಸಲೀಂ ಖಾನ್‌ಗೆ ಕಳೆದ ಕೆಲವು ತಿಂಗಳುಗಳಿಂದ ಬೆದರಿಕೆ ಕರೆಗಳು ಬರುತ್ತಿರುವುದರಿಂದ ಈ ಬೆಳವಣಿಗೆ ಕಂಡುಬಂದಿದೆ.

ಕೆಲವು ವಾರಗಳ ಹಿಂದೆ ನಟ ಮತ್ತು ಅವರ ಕುಟುಂಬಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆದರೆ ಬಿಷ್ಣೋಯಿ ಸಂದರ್ಶನವೊಂದರಲ್ಲಿ 'ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ತನ್ನ ಜೀವನದ ಗುರಿ' ಎಂದು ಹೇಳಿಕೊಂಡಿದ್ದರು.

ಖಾನ್ ಅವರ ಮುಂಬರುವ 'ಕಿಸ್ಸಿ ಕಾ ಭಾಯ್, ಕಿಸ್ಸಿ ಕಿ ಜಾನ್' ಚಿತ್ರ ಇದೇ ತಿಂಗಳ ಕೊನೆಯಲ್ಲಿ ರಂಜಾನ್ ಹಬ್ಬದ ಅಂಗವಾಗಿ ತೆರೆ ಮೇಲೆ ಬರಲಿದೆ.

'ಟೈಗರ್ 3' ಮತ್ತು 'ಟೈಗರ್ v/s ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ಅವರೊಂದಿಗೆ ಸಲ್ಮಾನ್ ಖಾನ್ ಕೆಲಸ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT