ಶನಿವಾರ, ಜನವರಿ 29, 2022
17 °C
ಒಡನಾಟ ನೆನಪಿಸಿಕೊಂಡ ನಟ ಜಗ್ಗೇಶ್‌

ಶಿವರಾಮಣ್ಣನ ಎದುರು ನಟನೆಗೆ ನಿಂತಾಗ ನನಗಿನ್ನೂ 16 ವರ್ಷ: ಜಗ್ಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಖ್ಯಾತ ನಟ ದಿವಂಗತ ಶಿವರಾಂ ಅವರ ಜೊತೆಗಿನ ಒಡನಾಟವನ್ನು ನಟ ಜಗ್ಗೇಶ್‌ ನೆನಪಿಸಿಕೊಂಡಿದ್ದಾರೆ.

‘ಶಿವರಾಂ ಅವರು ಕಂಠೀರವ ಸ್ಟುಡಿಯೊದಲ್ಲಿ ಈ ಪಾತ್ರ ಮಾಡುವಾಗ, ಈ ಸನ್ನಿವೇಶಕ್ಕೆ ಹುಡುಗರು ಬೇಕು ಎಂದಾಗ ಅಲ್ಲಿ ನಿಂತಿದ್ದ ನನ್ನನ್ನು ಕರೆದು ನಿಲ್ಲಿಸಿದರು. ಆಗ ನನಗೆ 16ವರ್ಷ! ಅಷ್ಟಕ್ಕೆ ನಾನು ಪುಳಕಿತನಾಗಿದ್ದೆ. ನಾನು ನಾಯಕನಟ ಆದ ಮೇಲೆ ನನ್ನ ಅನೇಕ ಚಿತ್ರದಲ್ಲಿ ಅವರು ನಟಿಸಿದ್ದರು. ಮುನಿಸಿನ ಸ್ವಭಾವದ ವ್ಯಕ್ತಿ. ಬಹಳ ತಿಳಿದಿದ್ದವರು. ಇಂದಿನ ತಲೆಮಾರಿಂದ ಸ್ವಲ್ಪ ದೂರ ಉಳಿಯುತ್ತಿದ್ದರು. ಕಲಾವಿದರ ಸಂಘಕ್ಕೆ ಅಣ್ಣನ ಜೊತೆ ಬಹಳ ಕಷ್ಟಪಟ್ಟವರು. ಯಾವುದೇ ಸಣ್ಣ ವಿಷಯಕ್ಕೆ ಅಣ್ಣ ಇವರನ್ನು ಕರೆಸುತ್ತಿದ್ದರು. ಪುಟ್ಟಣ್ಣ ಕಣಗಾಲ್, ಅಂಬರೀಶ್, ವಿಷ್ಣುರವರ ಆತ್ಮೀಯ ಬಳಗದವರು. ಉದ್ಯಮದಲ್ಲಿ ಯಾರೇ ಕಾಲವಾದರು ಹಿರಿಯನಾಗಿ ನಿಲ್ಲುತ್ತಿದ್ದರು. ಅಯ್ಯಪ್ಪನ ಪರಮಭಕ್ತರು. ಪೂಜೆಮಾಡುತ್ತಾ ಸಾವಿಗೆ ಶರಣು. ನಿಮ್ಮ ಆತ್ಮಕ್ಕೆ ಶಾಂತಿ’ ಎಂದು ಟ್ವೀಟ್‌ ಮೂಲಕ ಜಗ್ಗೇಶ್‌ ನೆನಪಿಸಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು