ಮಂಜು ಸ್ವರಾಜ್ ನಿರ್ದೇಶನದಲ್ಲಿ ಅಮೂಲ್ಯ ನಾಯಕಿಯಾಗಿ ನಟಿಸುತ್ತಿರುವ ‘ಪೀಕಬೂ’ ಚಿತ್ರಕ್ಕೆ ಶ್ರೀರಾಮ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಜತೆಗೆ ಅವರು ತಮ್ಮ ಹೆಸರನ್ನು ಶ್ರೀಮಾದೇವ್ ಇಂದ ಶ್ರೀರಾಮ್ ಎಂದು ಬದಲಿಸಿಕೊಂಡಿದ್ದಾರೆ. ನಾಯಕನ ಪಾತ್ರ ಪರಿಚಯಿಸುವ ಟೀಸರ್ ಅನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದೆ.

ಕಿರುತೆರೆಯಿಂದ ಗುರುತಿಸಿಕೊಂಡ ಶ್ರೀಮಾದೇವ್ ‘ಇರುವುದೆಲ್ಲವ ಬಿಟ್ಟು’, ‘ಹೊಂದಿಸಿಬರೆಯಿರಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಮಂಜು ಸ್ವರಾಜ್ ಈ ಹಿಂದೆ ‘ಶ್ರಾವಣಿ ಸುಬ್ರಮಣ್ಯ’ಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಗಣೇಶ್–ಅಮೂಲ್ಯ ಜೋಡಿಯ ಈ ಚಿತ್ರ ಸೂಪರ್ ಹಿಟ್ ಆಗಿತ್ತು.

ಶ್ರೀ ಕೆಂಚಾಂಬ ಸಿನಿಮಾ ಬ್ಯಾನರ್ನಡಿಯಲ್ಲಿ ಗಣೇಶ್ ಕೆಂಚಾಂಬ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಶೇಕಡ 60ರಷ್ಟು ಚಿತ್ರೀಕರಣ ಮುಗಿದಿದೆ ಎಂದು ಚಿತ್ರತಂಡ ಹೇಳಿದೆ. ಸುರೇಶ್ ಬಾಬು ಛಾಯಾಚಿತ್ರಗ್ರಹಣ, ವೀರ್ ಸಮರ್ಥ್, ಶ್ರೀಧರ್ ಕಶ್ಯಪ್ ಸಂಗೀತ, ಎನ್.ಎಂ ವಿಶ್ವ ಸಂಕಲನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.