ತಮಿಳು ನಟ ಶಿಂಬುಗೆ ಸೇರಿದ ಕಾರು ಅಪಘಾತ: ವೃದ್ಧ ಸಾವು

ಚೆನ್ನೈ: ತಮಿಳಿನ ಖ್ಯಾತ ನಟ ಶಿಂಬು ಅವರಿಗೆ ಸೇರಿದ ಕಾರು ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು ಮುನುಸ್ವಾಮಿ (70) ಎಂದು ಗುರುತಿಸಲಾಗಿದೆ. ಮಾರ್ಚ್ 18ರಂದು ಈ ಘಟನೆ ನಡೆದಿದ್ದು, ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
நடிகர் சிலம்பரசனின் தந்தையும், பிரபல இயக்குனருமான டி.ராஜேந்திரன் கார் மோதி தனியார் காவலாளி பலி. டி.ஆரின் ஓட்டுநர் செல்வம் கைது.@polimernews @ChennaiTraffic #TRajendhra #Simbu #CarAccident #cctv pic.twitter.com/WZ8AWzEpNp
— Saravanakumar (@Saravananjourno) March 23, 2022
ಅನಾರೋಗ್ಯ ಪೀಡಿತರಾಗಿದ್ದ ಮುನುಸ್ವಾಮಿ ತೆವಳುತ್ತ ರಸ್ತೆ ದಾಟುತ್ತಿರುವಾಗ ಕಾರು ಅವರ ಮೇಲೆ ಹರಿದಿದೆ. ಈ ಕಾರು ಶಿಂಬು ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಪೊಲೀಸರು ಶಿಂಬು ತಂದೆ ರಾಜೇಂದ್ರನ್ ಅವರ ಕಾರು ಚಾಲಕ ಸೆಲ್ವಂ ಎಂಬುವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಶಿಂಬು ಇದ್ದರೇ? ಅಥವಾ ಯಾರೆಲ್ಲ ಇದ್ದರು? ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.