ಬೆಂಗಳೂರು: ಚಂದನವನದ ಬೇಡಿಕೆಯ ನಟಿ ಅದಿತಿ ಪ್ರಭುದೇವ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಖಚಿತಪಡಿಸಿದ್ದಾರೆ.

ಸೋಮವಾರ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಇನ್‌ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥದ ವಿಷಯವನ್ನು ಖಚಿತಪಡಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ದಾವಣಗೆರೆ ಮೂಲದ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಅದರ ಜತೆಯಲ್ಲಿ ‘ಒಂದು ಕನಸಿನಂತೆ ಈ ಕನಸು ನಿಜವಾಗಿದೆ’ ಎಂದು ಬರೆದಿದ್ದಾರೆ. ಹಾಗೆ ಹ್ಯಾಶ್‌ಟ್ಯಾಗ್ ಹಾಕಿ ಎಂಗೆಜ್ಡ್‌ಎಂದು ಬರೆದುಕೊಂಡಿದ್ದಾರೆ.

ಓದಿ:ಮಧುಬನ್ ಹಾಡಿನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ಸನ್ನಿ ಲಿಯೋನ್ ವಿರುದ್ಧ ಆಕ್ರೋಶ

ಅಭಿಮಾನಿಗಳು ಸೇರಿದಂತೆ ಸಿನಿಮಾ,ಕಿರುತೆರೆಯ ಗಣ್ಯರು, ಆಪ್ತರು, ಗೆಳೆಯರು ಶುಭಾಶಯಗಳನ್ನು ಹೇಳುತ್ತಿದ್ದಾರೆ. ಭಾನುವಾರ (ಡಿಸೆಂಬರ್ 26) ಹೊಳೆನರಸೀಪುರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹುಡುಗ ದಾವಣಗೆರೆ ಮೂಲದವರು ಎನ್ನಲಾಗಿದೆ.

ಓದಿ:ಸನ್ನಿ ಲಿಯೋನ್ ಅವರ ವಿಡಿಯೊ ಆಲ್ಬಂ ನಿಷೇಧಕ್ಕೆ ಬೃಂದಾವನದ ಅರ್ಚಕರ ಒತ್ತಾಯ

ಇತ್ತೀಚೆಗೆ ಅದಿತಿ ನಟನೆಯ ‘ಆನ’ ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಅವರ ಇನ್ನು ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.