ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಸೀರೆಯುಟ್ಟು ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಅಲಿಯಾ ಭಟ್‌

Published 18 ಅಕ್ಟೋಬರ್ 2023, 5:50 IST
Last Updated 18 ಅಕ್ಟೋಬರ್ 2023, 5:50 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ಪ್ರಶಸ್ತಿ ಪಡೆಯಲು ಬಾಲಿವುಡ್‌ ನಟಿ ಅಲಿಯಾ ಭಟ್‌ ಅವರ ಮದುವೆ ಸೀರೆಯುಟ್ಟು, ಪತಿ ರಣಬೀರ್‌ ಕಪೂರ್‌ ಅವರೊಂದಿಗೆ ದೆಹಲಿಯ ವಿಜ್ಞಾನ ಭವನಕ್ಕೆ ಆಗಮಿಸಿದ್ದರು.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಭಾಯ್ ಕಥಿಯವಾಡಿ‘ ಚಿತ್ರದಲ್ಲಿನ ಅಭಿನಯಕ್ಕಾಗಿ ಆಲಿಯಾ ಭಟ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ರಾಷ್ಟ್ರಪತಿ ದ್ರೌಪತಿ ಮುರ್ಮ ಅವರು ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಸವ್ಯಾಸಾಚಿ ಕ್ರಿಯೇಷನ್ಸ್ ವಿನ್ಯಾಸಗೊಳಿಸಿದ ಗೋಲ್ಡನ್ ಎಂಬ್ರಾಯ್​​ಡರಿ ಸೀರೆಯೊಂದಿಗೆ ಆಫ್-ವೈಟ್​ನಲ್ಲಿ ಆಲಿಯಾ ಮಿಂಚಿದರು. ಇದೇ ವರ್ಷ ಏಪ್ರಿಲ್‌ನಲ್ಲಿ ಬಾಲಿವುಡ್ ನಟ ರಣಬೀರ್‌ ಕಪೂರ್‌ ಅವರೊಂದಿಗೆ ಹಸೆಮಣೆ ಏರಿದ್ದರು.

ಪತಿ ರಣಬೀರ್‌ ಕಪೂರ್‌ ಅವರೊಂದಿಗೆ ಅಲಿಯಾ

ಪತಿ ರಣಬೀರ್‌ ಕಪೂರ್‌ ಅವರೊಂದಿಗೆ ಅಲಿಯಾ

ಚಿತ್ರ ಕೃಪೆ: ಸಾಮಾಜಿಕ ಜಾಲತಾಣ ಎಕ್ಸ್‌

ಮಿಮಿ ಚಿತ್ರದಲ್ಲಿನ  ಅಭಿನಯಕ್ಕಾಗಿ ಕೃತಿ ಸನೋನ್ ಅವರೊಂದಿಗೆ ಆಲಿಯಾ ಭಟ್ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಹಂಚಿಕೊಂಡರು

ಸಾಮಾನ್ಯವಾಗಿ ಸಾರ್ಜನಿಕವಾಗಿ ಕಾಣಿಸಿಕೊಳ್ಳುವ ಬಾಲಿವುಡ್‌ ನಟ– ನಟಿಯರು ಧರಿಸಿರುವ ಉಡುಗೆಗಳನ್ನು ಪುನಃ ಧರಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT