ಲಾಸ್ ಏಂಜಲೀಸ್: ಅಮೆರಿಕದ ನಟಿಯೊಬ್ಬರು ಲಾಸ್ ಏಂಜಲೀಸ್‌ನ ಬೀದಿಯಲ್ಲಿ ಬೆತ್ತಲೆಯಾಗಿ ತಿರುಗಿರುವ ಘಟನೆ ನಡೆದಿದೆ.
36 ವರ್ಷದ ನಟಿ ಅಮಂಡಾ ಬೈನ್ಸ್ ಅವರು ಲಾಸ್ ಏಂಜಲೀಸ್‌ನ ಡೌನ್ ಟೌನ್ ಸ್ಟ್ರೀಟ್‌ನಲ್ಲಿ ಕಳೆದ ಭಾನುವಾರ ಬೆತ್ತಲೆಯಾಗಿ ತಿರುಗಾಡಿದ್ದನ್ನು ಸ್ಥಳೀಯರು ಕಂಡಿದ್ದಾರೆ.
ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅಮಂಡಾ ಬೈನ್ಸ್ ಅವರನ್ನು 72 ಗಂಟೆ ಮಾನಸಿಕ ಕೇಂದ್ರದ ಬಂಧನದಲ್ಲಿರಿಸಲಾಗಿತ್ತು ಎಂದು ‘ಮಿರರ್’ ಮಾಧ್ಯಮ ವರದಿ ಮಾಡಿದೆ.
ಅಮಂಡಾ ಬೈನ್ಸ್ ಅವರು ಬೆತ್ತಲೆಯಾಗಿ ತಿರುಗಾಡುವಾಗ ಕೆಲವು ಕಾರುಗಳನ್ನು ತಡೆದು ನಿಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಮಂಡಾ ಬೈನ್ಸ್ ಮಾನಸಿಕ ಸಮಸ್ಯೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಹೇರ್‌ಸ್ಪ್ರೇ, ಶೀಸ್ ದಿ ಮ್ಯಾನ್ ಎಂಬ ಕಿರುತರೆ ಜನಪ್ರಿಯ ಶೋ ಮೂಲಕ ಹಾಗೂ ಬಾಲನಟಿಯಾಗಿ ಅಮಂಡಾ ಬೈನ್ಸ್ ಹೆಸರು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.