ಮಂಗಳವಾರ, ಜನವರಿ 21, 2020
25 °C
ವಿದೇಶದಲ್ಲಿ ತಾರೆಗಳ ಹೊಸವರ್ಷ

ವಿದೇಶದಲ್ಲಿ ತಾರೆಗಳ ಹೊಸವರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ್ರಿ ಸ್‌ಮಸ್ ಹಬ್ಬವೂ ಸೇರಿ ವರ್ಷಾರಂಭಕ್ಕೆ ರಜೆಯ ಸುಗ್ಗಿ. ‍ಪ್ರವಾಸಗಳದ್ದೇ ಸದ್ದು, ಬಾಲಿವುಡ್‌ ಸ್ವಾರ್‌ಗಳು ಇದರಲ್ಲಿ ಮೊದಲು. ಹೊಸ ವರ್ಷ ಆಚರಣೆಗೆಂದು ಸ್ವಿಟ್ಜರ್ಲೆಂಡ್‌ನ ಸ್ವಿಸ್‌ ರೆಸಾರ್ಟ್‌ ಆಫ್ ಗಸ್ಟಡ್‌ನಲ್ಲಿ ಬೀಡುಬಿಟ್ಟಿದ್ದ ಕರೀನಾ ಕಪೂರ್, ತೈಮುರ್, ಸೈಫ್‌ ಅಲಿ ಖಾನ್, ಕರೀಷ್ಮಾ ಕಪೂರ್‌ ತಿಂಗಳ ಬಳಿಕ ಮುಂಬೈಗೆ ಮರಳಿದ್ದಾರೆ.

ಹೊಸವರ್ಷ ಆಚರಣೆಗೆ ತೆರಳಿದ್ದ ವರುಣ್‌ ಧವನ್, ಗೆಳತಿ ನತಾಶ ದಾಲ್, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಕೂಡ ಸ್ವಿಟ್ಜರ್ಲೆಂಡ್‌ನಲ್ಲಿದ್ದು ಎಲ್ಲರು ಒಟ್ಟಿಗೆ ಸೇರಿ ಹಿಮದಲ್ಲಿ ಮೋಜು ಮಾಡುತ್ತಿದ್ದಾರೆ. ಇನ್ನೂ ಅನನ್ಯಾ ಪಾಂಡೆ ತಮ್ಮ ಬಾಲ್ಯದ ಗೆಳತಿಯೊಂದಿಗೆ ದುಬೈ ಸಮುದ್ರ ದಂಡೆಯಲ್ಲಿ ಮುಳುಗೇಳುತ್ತಿದ್ದಾರೆ.

ನೇಹಾ ಶರ್ಮ ರಜೆ ಕಳೆಯಲು ಹವಾಯಿಯಲ್ಲಿ ಮನೆಯನ್ನೇ ಖರೀದಿಸಿದ್ದಾರೆ. ಹೊಸ ಮನೆಯ ಬೆಡ್‌ರೂಂನಲ್ಲಿ ಕೂತು ತೆಗೆಸಿಕೊಂಡ ಗ್ಲಾಮರಸ್‌ ಫೋಟೊಗಳನ್ನು  ಇನ್‌ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ದಿನವೆಲ್ಲಾ ಸಮುದ್ರ ಆಮೆಯೊಂದಿಗೆ ಆಟವಾಡುತ್ತಾ ಕುಳಿತಿದ್ದೆ ಎಂದು ಆಮೆಯೊಂದಿಗಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.  ಈಚೆಗೆ ಬಿಡುಗಡೆಯಾದ ‘ತಾನಾಜಿ: ದಿ ಅನ್‌ಸಂಗ್‌ ವಾರಿಯರ್ ’ ಸಿನಿಮಾದ ಪೋಸ್ಟರ್‌ ಅನ್ನು ರಜೆ  ನಡುವೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಾರಾ ಅಲಿಖಾನ್ ತಮ್ಮ ತಾಯಿ ಅಮೃತಾ ಸಿಂಗ್ ಹಾಗೂ ಸಹೋದರ ಇಬ್ರಾಹಿಂ ಅಲಿ ಖಾನ್‌ ಜೊತೆ ಮಾಲ್ಡೀವ್ಸ್‌ನಲ್ಲಿ ರಜೆ ಕಳೆಯುತ್ತಿದ್ದಾರೆ. ಇವರ ಪ್ರತಿ ಫೋಟೊವೂ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗುತ್ತಿದೆ. ರಜೆ ಮುಗಿಸಿಕೊಂಡು ಮುಂಬೈ ವಿಮಾನ ನಿಲ್ದಾಣ ಬಂದ ಅವರ ಫೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು