ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದೇ ಹಸೆಮಣೆಯೇರಿದ ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್‌

Published 6 ಮಾರ್ಚ್ 2024, 7:34 IST
Last Updated 6 ಮಾರ್ಚ್ 2024, 7:34 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಗಿಣಿ’ ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದ ನಟಿ ದೀಪಿಕಾ ದಾಸ್ ಅವರು ವಿವಾಹವಾಗಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಮದುವೆ ಫೋಟೊಗಳನ್ನು ಹಂಚಿಕೊಂಡಿರುವ ಅವರು, ಉದ್ಯಮಿ ದೀಪಕ್ ಅವರನ್ನು ವರಿಸಿರುವುದಾಗಿ ತಿಳಿಸಿದ್ದಾರೆ.

‘ಯಾವಾಗಲೂ ನಾನು ಪರಿಪೂರ್ಣವಾದದನ್ನು, ಅತ್ಯುತ್ತಮವಾದದನ್ನು ಬಯಸುತ್ತೇನೆ. ಇದು ಹಠಾತ್ ಆಗಿ ನಡೆದ ಕಾರ್ಯಕ್ರಮವಲ್ಲ. ಚೆನ್ನಾಗಿ ಯೋಚಿಸಿಯೇ ಈ ಯೋಜನೆ ಮಾಡಲಾಗಿದೆ. ನಾನು ನನ್ನ ಆತ್ಮ ಸಂಗಾತಿಯನ್ನು ಕಂಡುಕೊಂಡಿದ್ದೇನೆ.. ಪಕ್ಕಾ ದೇಸಿ’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಗೋವಾದಲ್ಲಿ ಮಾರ್ಚ್‌ 1ರಂದು ವಿವಾಹ ಕಾರ್ಯಕ್ರಮ ನಡೆದಿದ್ದು, ಕುಟುಂಬ ಸದಸ್ಯರಷ್ಟೇ ವಿವಾಹದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದ ದೀಪಿಕಾ ಅವರಿಗೆ ನಾಗಿಣಿ ಧಾರವಾಹಿ ದೊಡ್ಡಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಅಲ್ಲದೇ ಕೆಲ ಕನ್ನಡ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT