ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಶಿಯಲ್ ಮೀಡಿಯಾಗಳಿಗೆ ವಿರಾಮ ಘೋಷಿಸಿದ ಕಾಜೋಲ್: ಕಿರುಕುಳಕ್ಕೊಳಗಾದರೇ ಖ್ಯಾತ ನಟಿ?

‘ಸಾಮಾಜಿಕ ಮಾಧ್ಯಮಗಳಿಂದ ತೊಂದರೆ ಅನುಭವಿಸುತ್ತಿದ್ದೇನೆ’ ಎಂಬ ಅರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
Published 9 ಜೂನ್ 2023, 10:05 IST
Last Updated 9 ಜೂನ್ 2023, 10:05 IST
ಅಕ್ಷರ ಗಾತ್ರ

ಮುಂಬೈ: ಖ್ಯಾತ ಬಾಲಿವುಡ್ ನಟಿ ಕಾಜೋಲ್ ಅವರು ಸಾಮಾಜಿಕ ಮಾಧ್ಯಮಗಳಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಅವರು ಶುಕ್ರವಾರ ಟ್ವಿಟರ್, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿಕೊಂಡಿದ್ದು ಸಾಮಾಜಿಕ ಮಾಧ್ಯಮಗಳಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿ, ‘ನನ್ನ ಜೀವನದ ಕಠಿಣ ಪ್ರಯೋಗಗಳಲ್ಲಿ ಒಂದನ್ನು ಎದುರಿಸುತ್ತಿದ್ದೇನೆ’ ಎಂದು ನಿಗೂಢವಾಗಿ ಹೇಳಿದ್ದಾರೆ.

ನಟ ಅಜಯ್ ದೇವಗನ್ ಅವರ ಪತ್ನಿ ಹಾಗೂ ಎರಡು ಮಕ್ಕಳ ತಾಯಿಯಾಗಿರುವ ಕಾಜೋಲ್, ಸಾಮಾಜಿಕ ಮಾಧ್ಯಮಗಳಲ್ಲಿ ಯಾರಿಂದಾದರೂ ಶೋಷಣೆಗೆ ಒಳಗಾದರೇ? ಎಂಬ ಅನುಮಾನವನ್ನು ಅವರ ಪೋಸ್ಟ್ ಮೂಡಿಸುತ್ತಿದೆ ಎಂದು ಅನೇಕ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಸಾಮಾಜಿಕ ಮಾಧ್ಯಮಗಳಿಂದ ತೊಂದರೆ ಅನುಭವಿಸುತ್ತಿದ್ದೇನೆ’ ಎಂಬ ಅರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿಯ ಎಲ್ಲ ಪೋಸ್ಟ್‌ಗಳನ್ನು ಅಳಿಸಿ ಹಾಕಿರುವ ಅವರು, ಟ್ವಿಟರ್‌, ಫೇಸ್‌ಬುಕ್ ಪೋಸ್ಟ್‌ಗಳನ್ನು ಅಳಿಸಿ ಹಾಕಿಲ್ಲ. ಅವರ ಈ ನಡೆಗೆ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿ, ನೀವು ಎಂತಹದೇ ಪರಿಸ್ಥಿತಿ ಎದುರಿಸಲು ಸಮರ್ಥರಿದ್ದೀರಿ ಎಂದು ಧೈರ್ಯ ತುಂಬಿದ್ದಾರೆ.

ಕಾಜೋಲ್ ಅವರು ಫೇಸ್‌ಬುಕ್‌ನಲ್ಲಿ 2.8 ಕೋಟಿ, ಟ್ವಿಟರ್‌ನಲ್ಲಿ 38 ಲಕ್ಷ ಹಾಗೂ ಇನ್‌ಸ್ಟಾಗ್ರಾಂನಲ್ಲಿ 1.4 ಕೋಟಿ ಫಾಲೋವರ್‌ಗಳುನ್ನು ಹೊಂದಿದ್ದಾರೆ.

ಇತ್ತೀಚೆಗೆ ಕಾಜೋಲ್ ಅಭಿನಯದ ‘ಸಲಾಂ ವೆಂಕಿ’ ಸಿನಿಮಾ ತೆರೆಕಂಡಿತ್ತು. ಲಸ್ಟ್ ಸ್ಟೋರಿಸ್ –2 ಇನ್ನಷ್ಟೇ ತೆರೆಕಾಣಬೇಕಿದೆ. ಬಾಲಿವುಡ್‌ನಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಈ ನಟಿ ತಮ್ಮ 48 ವಯಸ್ಸಿನಲ್ಲೂ ಮಾಡಲಿಂಗ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT