ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ಸೂರಜ್ ನಂಬಿಯಾರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿ ರಾಯ್

Last Updated 27 ಜನವರಿ 2022, 9:40 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ಮೌನಿ ರಾಯ್ ಅವರು ಗೆಳೆಯ, ಉದ್ಯಮಿ ಸೂರಜ್ ನಂಬಿಯಾರ್ ಜತೆ ಗೋವಾದಲ್ಲಿ ಗುರುವಾರ ಮದುವೆಯಾಗಿದ್ದಾರೆ.

ಮೌನಿ ರಾಯ್ ಮತ್ತು ಸೂರಜ್ ಮದುವೆಯ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.

ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಆಪ್ತರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿದೆ.

2019ರಲ್ಲಿ ಹೊಸ ವರ್ಷಾಚರಣೆಯ ಸಂದರ್ಭ ಮೌನಿ ರಾಯ್‌ ಅವರಿಗೆ ಸೂರಜ್ ಪರಿಚಯವಾಗಿತ್ತು. ಬಳಿಕ ಅವರಿಬ್ಬರ ಮಧ್ಯೆ ಪ್ರೀತಿ ಉಂಟಾಗಿತ್ತು. ಆದರೆ ಪ್ರೀತಿಸುತ್ತಿರುವ ವಿಚಾರವನ್ನು ಎಲ್ಲಿಯೂ ಇಬ್ಬರೂ ಬಹಿರಂಗಪಡಿಸಿರಲಿಲ್ಲ.

ಬಿಳಿ ಬಣ್ಣದ, ಕೆಂಪು ಅಂಚಿನ ಸೀರೆಯುಟ್ಟು ನಟಿ ಮೌನಿ ರಾಯ್ ಕಂಗೊಳಿಸಿದರೆ, ವರ ಸೂರಜ್, ಚಿನ್ನದ ಬಣ್ಣದ ಕುರ್ತಾ ಮತ್ತು ಬಿಳಿ ಪಂಚೆಯುಟ್ಟು ಮದುವೆ ಶಾಸ್ತ್ರ ನೆರವೇರಿಸಿದರು.

ಸೂರಜ್ ಅವರು ಮಲೆಯಾಳಿ ಕುಟುಂಬದವರಾಗಿದ್ದು, ಮಲೆಯಾಳಂ ಸಂಪ್ರದಾಯದಂತೆ ಗೋವಾದಲ್ಲಿ ಮದುವೆ ನಡೆದಿದೆ.

ಗುರುವಾರ ಬೆಳಗ್ಗೆ ಮೌನಿ ರಾಯ್ ಅವರು, ಎವರಿಥಿಂಗ್ ಎಂಬ ಅಡಿಬರಹ ನೀಡಿ, ಸೂರಜ್ ಜತೆಗಿನ ಫೋಟೊ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ, ಭಾವಿ ಪತಿಯ ಪರಿಚಯ ಮಾಡಿಕೊಟ್ಟದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT