ಮಂಗಳವಾರ, ಮೇ 24, 2022
26 °C

ನನ್ನವನು ಎಂದು ಭಾವಿ ಪತಿಯ ಫೋಟೊ ಹಂಚಿಕೊಂಡ ಕೆಜಿಎಫ್ ಬೆಡಗಿ ಮೌನಿ ರಾಯ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Mouni Roy Instagram

ಬೆಂಗಳೂರು: ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯ ಗಲೀ ಗಲೀ ಹಾಡಿನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ನಟಿ ಮೌನಿ ರಾಯ್, ಗೆಳೆಯನ ಜತೆ ಮದುವೆಗೆ ಸಜ್ಜಾಗಿದ್ದಾರೆ.

ಮೌನಿ ರಾಯ್ ಅವರು ಸೂರಜ್ ನಂಬಿಯಾರ್ ಜತೆಗೆ ಇರುವ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೌನಿ ರಾಯ್ ಅವರ ಪೋಸ್ಟ್ ಅನ್ನು 5 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ಗೆಳೆಯರು, ಚಿತ್ರರಂಗದವರು ಮತ್ತು ಅಭಿಮಾನಿಗಳು ಈ ಜೋಡಿಗೆ ಶುಭ ಕೋರಿದ್ದಾರೆ.

ಜನವರಿ 27ರಂದು ಗೋವಾದಲ್ಲಿ ಸೂರಜ್ ನಂಬಿಯಾರ್ ಜತೆ ಮೌನಿ ರಾಯ್ ವಿವಾಹ ನಡೆಯಲಿದೆ.

ಮೆಹಂದಿ ಕಾರ್ಯಕ್ರಮದ ಫೋಟೊಗಳನ್ನು ಪೋಸ್ಟ್ ಮಾಡಿದ್ದ ಮೌನಿ ಅವರಲ್ಲಿ, ತಮ್ಮ ಭಾವಿ ಪತಿಯ ಫೋಟೊ ಪ್ರಕಟಿಸುವಂತೆ ಅಭಿಮಾನಿಗಳು ಕೇಳಿಕೊಂಡಿದ್ದರು.

ಅದರಂತೆ, ಮೌನಿ ಅವರು ಸೂರಜ್‌ರನ್ನು ಅಪ್ಪಿಕೊಂಡಿರುವ ಫೋಟೊ ಪೋಸ್ಟ್ ಮಾಡಿ, ಎವರಿಥಿಂಗ್, ಹರಿ ಓಂ, ಓಂ ನಮಃ ಶಿವಾಯ ಎಂದು ಅಡಿಬರಹ ನೀಡಿದ್ದಾರೆ.

ಮೂಲತಃ ಬೆಂಗಳೂರಿನವರಾದ ಸೂರಜ್, ಇಲ್ಲಿಯೇ ಶಿಕ್ಷಣ ಮುಗಿಸಿ, ನಂತರ ದುಬೈನಲ್ಲಿ ಉದ್ಯಮ, ಬ್ಯಾಂಕಿಂಗ್ ಹೂಡಿಕೆ ಹಾಗೂ ಪುಣೆಯಲ್ಲಿ ಈವೆಂಟ್ ಮ್ಯಾನೇಜ್‌ಮೆಂಟ್ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು