ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾಗಳ ಮುಂದೆ ನಟಿ, ಪ್ರಿಯಾಂಕ ಚೋಪ್ರಾ ಸಹೋದರಿ ಮನ್ನಾರಗೆ ನಿರ್ದೇಶಕನ ಚುಂಬನ

Published 29 ಆಗಸ್ಟ್ 2023, 14:53 IST
Last Updated 29 ಆಗಸ್ಟ್ 2023, 14:53 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಿಯಾಂಕ ಚೋಪ್ರಾ ಅವರ ಸಹೋದರಿ, ನಟಿ ಮನ್ನಾರ ಚೋಪ್ರಾ ಅವರಿಗೆ ಮಾಧ್ಯಮಗಳ ಮುಂದೆ ತೆಲುಗು ನಿರ್ದೇಶಕ ಎ.ಎಸ್‌ ರವಿ ಕುಮಾರ್ ಚೌಧರಿ ಚುಂಬಿಸಿರುವ ಘಟನೆ ನಡೆದಿದೆ.

ಎ.ಎಸ್‌ ರವಿ ನಿದೇರ್ಶಿಸಿರುವ ‘Tiragabadara Saami‘ ತೆಲುಗು ಚಿತ್ರದಲ್ಲಿ ನಟ ರಾಜ್ ತರುಣ್‌ಗೆ ನಾಯಕ ನಟಿಯಾಗಿ ಮನ್ನಾರ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಚುಂಬನದ ಘಟನೆ ನಡೆದಿದೆ.

ಕ್ಯಾಮರಾಗಳಿಗೆ ಪೋಸ್‌ ನೀಡುತ್ತಿದ್ದ ಮನ್ನಾರ ಚೋಪ್ರಾ ಅವರಿಗೆ ಏಕಾಏಕಿ ಬಂದು ರವಿ ಚೌಧರಿ ಚುಂಬಿಸಿದರು. ಈ ವೇಳೆ ಮನ್ನಾರ ಒಂದು ಕ್ಷಣ ಆತಂಕಕ್ಕೆ ಒಳಗಾಗಿರುವಂತೆ ವಿಡಿಯೊದ ದೃಶ್ಯಗಳಲ್ಲಿ ಕಂಡುಬಂದಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಿರ್ದೇಶಕರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ವೃತ್ತಿ ಪರಧಿಯ ಯೆಲ್ಲೇ ಮೀರಬಾರದೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಬಾಲಿವುಡ್‌ನ ‘ಜಿದ್‘ ಸಿನಿಮಾದ ಮೂಲಕ ಸಿನಿರಂಗಕ್ಕೆ ಪಾದರ್ಪಣೆ ಮಾಡಿದ ಮನ್ನಾರ ಚೋಪ್ರಾ, ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT