ಜೆ.ಎಸ್.ವಾಲಿ ಛಾಯಾಚಿತ್ರಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನ ಚಿತ್ರಕ್ಕಿದೆ. ರವಿಶಂಕರ್, ರಂಗಾಯಣ ರಘು ಮುಂತಾದವರು ತಾರಾಬಳಗದಲ್ಲಿದ್ದಾರೆ. ‘ಭೈರಾದೇವಿ’ ನಂತರ ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಜೊತೆ ರಾಧಿಕಾ ನಟಿಸಿರುವ ‘ಅಜಾಗ್ರತ’ ಬಿಡುಗಡೆಯಾಗಲಿದೆ. ರಾಧಿಕಾ ಸಹೋದರ ರವಿರಾಜ್ ಅವರೇ ಈ ಸಿನಿಮಾ ನಿರ್ಮಿಸುತ್ತಿದ್ದು, ಎಂ.ಶಶಿಧರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.