ಮುಂಬೈ: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿತ್ತು.

ಇದರಲ್ಲಿ ರಶ್ಮಿಕಾ ದರೋಡೆಕೋರನ ಪ್ರೇಯಸಿಯಂತೆ, ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೈಯಲ್ಲಿ ಹೂವು ಹಿಡಿದು ವಿಭಿನ್ನ ಶೈಲಿಯಲ್ಲಿ ಮೂಡಿಬಂದ ರಶ್ಮಿಕಾ ನೋಡಿ ಅಭಿಮಾನಿಗಳು ‘ಪುಷ್ಪ’ ಸಿನಿಮಾ ನೋಡಲು ಕಾತರರಾಗಿದ್ದಾರೆ.

ಈ ಪಾತ್ರದ ಬಗ್ಗೆ ಇಂದು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ರಶ್ಮಿಕಾ, ‘ಪುಷ್ಪದಲ್ಲಿ ನನ್ನ ಫಸ್ಟ್ ಲುಕ್ ನೋಡಿದ ಅಭಿಮಾನಿಗಳು, ಸಿನಿ ಪ್ರಿಯರು ಸಾಕಷ್ಟು ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ಚಿತ್ರದ ಬಗ್ಗೆ ನನಗೆ ರೋಮಾಂಚನವಾಗಿದೆ. ಈ ಪಾತ್ರ ಮಾಡಿರುವುದು ನನಗೆ ಖುಷಿ ನೀಡಿದೆ’ಎಂದಿದ್ದಾರೆ.

‘ಇದು ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ನಾನೊಬ್ಬ ನಟಿಯಾಗಿ ನನ್ನ ಪ‍್ರತಿಭೆ ತೋರಿಸಲು ಈ ಸಿನಿಮಾನನಗೆ ಉತ್ತಮ ಅವಕಾಶ ನೀಡಿದೆ. ಪುಷ್ಪ ನನ್ನ ಸಿನಿಪಯಣದಲ್ಲಿ ಒಂದು ಮೈಲಿಗಲ್ಲಾಗಲಿದ್ದು, ನಾನಂತೂ ಸಿನಿಮಾ ನೋಡಲು ನಿಮ್ಮಂತೆ ಕಾತರಳಾಗಿದ್ದೇನೆ‘ ಎಂದು ಅಭಿಮಾನಿಗಳನ್ನುದ್ದೇಶಿಸಿ ಹೇಳಿದ್ದಾರೆ.

ಡಿಸೆಂಬರ್ 17 ಕ್ಕೆ ಪುಷ್ಪ ಬಿಡುಗಡೆ

ಡಿಸೆಂಬರ್ 17 ರಂದು ‘ಪುಷ್ಪ‘ ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ಈ ವಿಷಯವನ್ನು ಟ್ವಿಟರ್‌ನಲ್ಲಿ ಚಿತ್ರತಂಡ ಪ್ರಕಟಿಸಿದೆ. ಈ ಮೊದಲು ಡಿಸೆಂಬರ್ 25 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಅದೇ ದಿನ ರಣವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ‘83‘ ಸಿನಿಮಾ ಬಿಡುಗಡೆಯಾಗಲಿದೆ. ಹೀಗಾಗಿ ಒಂದು ವಾರ ಮೊದಲೇ ‘ಪುಷ್ಪ’ಬಿಡುಗಡೆಯಾಗುತ್ತಿದೆ.

ಆಗಸ್ಟ್ 13 ಕ್ಕೆ ಬಿಡುಗಡೆಯಾಗಬೇಕಿದ್ದಪುಷ್ಪ ಕೋವಿಡ್ ಕಾರಣದಿಂದ ಒಂದು ಬಾರಿ ಮುಂದೂಡಲಾಗಿತ್ತು.

ಆಂಧ್ರಪ್ರದೇಶದ ರಕ್ತಚಂದನ ಚೋರರ ಕಥೆ ಹೊಂದಿರುವ ‘ಪುಷ್ಪ’ದಲ್ಲಿ ಅಲ್ಲು ಅರ್ಜುನ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರಿಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಅಲ್ಲದೇ ಡಾಲಿ ಧನಂಜಯ್, ಫಹಾದ್ ಫಾಸಿಲ್, ಜಗಪತಿ ಬಾಬು, ವೆನಿಲಾ ಕಿಶೋರ್ ತಾರಾಗಣದಲ್ಲಿದ್ದಾರೆ.

‘ಪುಷ್ಪ’ ಚಿತ್ರತಂಡವು ಕಳೆದ ವಾರವಷ್ಟೇ ರಶ್ಮಿಕಾ ಮಂದಣ್ಣ ಅವರ ಶ್ರೀವಲ್ಲಿ ಪಾತ್ರದಫಸ್ಟ್‌ಲುಕ್ ಬಿಡುಗಡೆ ಮಾಡಿತ್ತು. ಹಳ್ಳಿ ಹುಡುಗಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನೋಡಿದರೆ ರಶ್ಮಿಕಾ ವಿಭಿನ್ನ ಪಾತ್ರ ಮಾಡುತ್ತಿರುವುದು ಗೊತ್ತಾಗುತ್ತದೆ.

‘ಆರ್ಯ’ ಹಾಗೂ ‘ಆರ್ಯ 2’ ಚಿತ್ರಗಳನ್ನು ನಿರ್ದೇಶಿಸಿದ್ದ ಸುಕುಮಾರ್ ನಿರ್ದೇಶನದ ಈ ಚಿತ್ರವು ತೆಲುಗು, ಕನ್ನಡ, ಮಲಯಾಳಂ, ಹಿಂದಿ, ತಮಿಳು ಭಾಷೆಯಲ್ಲಿ ತೆರೆಕಾಣಲಿದೆ.

ರಕ್ತಚಂದನ ಚೋರರ ಕಥೆಯುಳ್ಳ ಈಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನಪಡೆದಿದೆ.

ಇದನ್ನೂ ಓದಿ:ತನ್ನ ಕೇರ್ ಟೇಕರ್ ಮಡಿಲಲ್ಲಿ ಅಳುತ್ತಾ ಪ್ರಾಣ ಬಿಟ್ಟ ಜಗತ್ತಿನ ಜನಪ್ರಿಯ ಗೊರಿಲ್ಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.