ಶನಿವಾರ, ಮೇ 28, 2022
21 °C

ಕ್ರಿಸ್‌ಮಸ್ ದಿನವೇ ಜಿಮ್ ವರ್ಕೌಟ್ ಆರಂಭಿಸಿದ ನಟಿ ಸಮಂತಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Samantha Ruth Prabhu

ಬೆಂಗಳೂರು: ‘ಊ ಅಂತಾವಾ‘ ಎಂದು ‘ಪುಷ್ಪ‘ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ಡ್ಯಾನ್ಸ್ ಮಾಡುವ ಮೂಲಕ ಸಿನಿರಸಿಕರ ಮನ ಗೆದ್ದಿದ್ದ ನಟಿ ಸಮಂತಾ ರುತ್ ಪ್ರಭು, ಫಿಟ್ನೆಸ್ ಕಾಯ್ದುಕೊಳ್ಳುವ ಸಲುವಾಗಿ ಜಿಮ್‌ಗೆ ಲಗ್ಗೆ ಇಟ್ಟಿದ್ದಾರೆ.

ಕ್ರಿಸ್‌ಮಸ್ ಟ್ರೀ ಸಮೀಪದಲ್ಲಿ ನಿಂತುಕೊಂಡು, ಹೃದಯದಾಕಾರದಲ್ಲಿ ಕೈ ಹಿಡಿದು ‘ಮೆರ್ರಿ ಕ್ರಿಸ್‌ಮಸ್‘ ಎಂದು ಅಭಿಮಾನಿಗಳಿಗೆ ಶುಭಕೋರಿದ್ದ ಸಮಂತಾ, ನಂತರ ಜಿಮ್‌ಗೆ ತೆರಳಿದ್ದಾರೆ. ಈ ಕುರಿತು ಅವರು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಿಯಾಗಿ, ಫಿಟ್ನೆಸ್ ಕಾಯ್ದುಕೊಳ್ಳುವುದು ಮತ್ತು ಸದಾ ಕ್ರಿಯಾಶೀಲರಾಗಿರುವುದು ಅವರಿಗೆ ಅಗತ್ಯವೂ ಹೌದು.


ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪೋಸ್ಟ್

ನಾಗ ಚೈತನ್ಯ ಜತೆಗಿನ ಮದುವೆ ಮುರಿದು ವಿಚ್ಛೇದನ ಪಡೆದುಕೊಂಡ ಬಳಿಕ ಸಮಂತಾ ಅವರನ್ನು ಟ್ರೋಲ್ ಮಾಡುವುದು ಮತ್ತು ವೈಯಕ್ತಿಕ ಬದುಕಿನ ಕುರಿತು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುವುದು ನಡೆಯುತ್ತಿದ್ದರೂ, ಅದಕ್ಕೆ ತಲೆಕೆಡಿಸಿಕೊಳ್ಳದೆ ಅವರು ಚಿತ್ರರಂಗದಲ್ಲಿ ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು