ಶುಕ್ರವಾರ, ಮೇ 20, 2022
25 °C

ಸೆಲೆಬ್ರಿಟಿಯನ್ನು ನೋಡಿ ತೂಕ ಕಳೆದುಕೊಳ್ಳಬೇಡಿ: ನಟಿ ಸಯ್ಯೇಷಾ ಕಿವಿಮಾತು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Sayyeshaa Instagram

ಬೆಂಗಳೂರು: ತೂಕ ಕಳೆದುಕೊಳ್ಳಬೇಕು ಮತ್ತು ಸೆಲೆಬ್ರಿಟಿಗಳಂತೆ ದೇಹಾಕಾರ ಹೊಂದಿರಬೇಕು ಎಂದು ಬಯಸುವವರಿಗೆ ನಟಿ ಸಯ್ಯೇಷಾ ಕಿವಿಮಾತು ಹೇಳಿದ್ದಾರೆ.

ಸೆಲೆಬ್ರಿಟಿಗಳನ್ನು ನೋಡಿ ನೀವು ತೂಕ ಕಳೆದುಕೊಳ್ಳುವ ನಿರ್ಧಾರ ಮಾಡಬೇಡಿ, ತೆಳ್ಳಗಿರುವುದು ಒಳ್ಳೆಯದೇ, ಆದರೆ ಅದಕ್ಕಾಗಿ ನೀವು ನಟ–ನಟಿಯರನ್ನು ಅನುಸರಿಸಬಾರದು, ಪ್ರತಿಯೊಬ್ಬರ ದೇಹದ ರಚನೆ ಮತ್ತು ಆಕಾರ, ತೂಕ ಭಿನ್ನವಾಗಿರುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಸಯ್ಯೇಷಾ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ತಮಿಳು ನಟ ಆರ್ಯ ಅವರನ್ನು ವಿವಾಹವಾಗಿರುವ ಸಯ್ಯೇಷಾ, ಕಳೆದ ಜುಲೈ ತಿಂಗಳಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಜಿಮ್ ವರ್ಕೌಟ್ ಮಾಡುತ್ತಿರುವ ಫೋಟೊ ಒಂದನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಹೆರಿಗೆಯ ಬಳಿಕ ತೂಕ ಕಳೆದುಕೊಳ್ಳುವುದು ಸುಲಭದ ಮಾತಲ್ಲ. ಹೆಚ್ಚುವರಿ ತೂಕವನ್ನು ಕಡಿಮೆ ಮಾಡಬೇಕಾಗುತ್ತದೆ. ಅದಕ್ಕಾಗಿ ಯಾವುದೋ ದಾರಿಯನ್ನು ಅನುಸರಿಸಬಾರದು. ಪ್ರತಿ ಮಹಿಳೆಯೂ ತಮ್ಮದೇ ರೀತಿಯಲ್ಲಿ ಸುಂದರವಾಗಿರುತ್ತಾರೆ. ತೆಳುವಾಗಿರುವುದು ಒಳ್ಳೆಯದೇ, ಯಾಕೆಂದರೆ ದೇಹದಲ್ಲಿನ ಹೆಚ್ಚುವರಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಮತ್ತು ಕೊನೆಯದಾಗಿ ಆರೋಗ್ಯವಂತರಾಗಿರುವುದೇ ನಮ್ಮ ಗುರಿಯಾಗಿರಬೇಕು. ಅದಕ್ಕೆ ಸಮಯ ತಗುಲುತ್ತದೆ. ಹಾಗೆಂದು ಯಾವುದೋ ಸೆಲೆಬ್ರಿಟಿಯನ್ನು ನೋಡಿ, ಅವರಂತೆ ಆಗಬೇಕೆಂಬ ಗುರಿ ಇಟ್ಟುಕೊಳ್ಳಬೇಡಿ, ಯಾಕೆಂದರೆ ಪ್ರತಿಯೊಬ್ಬರೂ ಭಿನ್ನವಾದ ದೇಹ ರಚನೆ ಮತ್ತು ಆರೋಗ್ಯ ಸ್ಥಿತಿಯನ್ನು ಹೊಂದಿರುತ್ತಾರೆ. ಈ ಫೋಟೊ ಹಾಕಿರುವ ಉದ್ದೇಶವೇನೆಂದರೆ, ಫಿಟ್ ಆಗಿರುವುದು ನನ್ನ ಜೀವನಶೈಲಿ ಮತ್ತು ಇದು ನನ್ನನ್ನು ಸಂತೋಷವಾಗಿರಿಸುತ್ತದೆ ಎಂದು ಸಯ್ಯೇಷಾ ಹೇಳಿದ್ದಾರೆ.

ಸಯ್ಯೇಷಾ ಅವರ ಹೇಳಿಕೆಗೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಮೆಚ್ಚುಗೆ ಕೂಡ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು