ನಿರ್ದೇಶಕ ಮಣಿರತ್ನಂ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ: ಪತ್ನಿ ಸುಹಾಸಿನಿ ಕಿಡಿ

ಚೆನ್ನೈ: ನಿನ್ನೆಯಷ್ಟೇ (ಜೂನ್ 2) ಖ್ಯಾತ ನಿರ್ದೇಶಕ ಮಣಿರತ್ನಂ ಅವರು ತಮ್ಮ 65 ನೇ ಜನ್ಮದಿನವನ್ನು ಆಚರಿಸಿಕೊಂಡರು. ಅವರ ಜನ್ಮದಿನವನ್ನೇ ನೆಪವಾಗಿಟ್ಟುಕೊಂಡು ಕಿಡಗೇಡಿಯೊಬ್ಬ ಟ್ವಿಟರ್‌ನಲ್ಲಿ ನಕಲಿ ಖಾತೆಯನ್ನು ತೆರೆದು ನೆಟ್ಟಿಗರಲ್ಲಿ ಗೊಂದಲಕ್ಕೆ ಕಾರಣವಾಗಿದ್ದ.
ಈ ಬಗ್ಗೆ ಸ್ವತಃ ಮಣಿರತ್ನಂ ಪತ್ನಿ ಹಾಗೂ ಹಿರಿಯ ನಟಿ ಸುಹಾಸಿನಿ ಅವರು ಟ್ವಿಟರ್‌ನಲ್ಲೇ ಸ್ಪಷ್ಟನೆ ಕೊಟ್ಟಿದ್ದು, ‘ಮಣಿರತ್ನಂ ಅವರು ಯಾವುದೇ ಟ್ವಿಟರ್ ಖಾತೆಯನ್ನು ಹೊಂದಿಲ್ಲ. @Dir_ ManiRatnam ಹೆಸರಿನಲ್ಲಿರುವ ಟ್ವಿಟರ್ ಖಾತೆ ನಕಲಿಯಾಗಿದ್ದು ಎಚ್ಚರವಾಗಿರಿ‘ ಎಂದು ಗುರುವಾರ ಟ್ವಿಟ್ ಮಾಡಿದ್ದಾರೆ.
There is a person claiming to be @ Dir_ ManiRatnam has tweeted that director ManiRatnam is starting his Twitter account today. It is false. He’s an impersonator. Pls be aware and spread the word around. Thank you.
— Suhasini Maniratnam (@hasinimani) June 2, 2021
ಮಣಿರತ್ನಂ ಹೆಸರಿನ ಟ್ವಿಟರ್ ಖಾತೆ ಆರಂಭವಾದ ಬೆನ್ನಲ್ಲೇ ಆ ಖಾತೆಯನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಜನ ಅನುಸರಿಸಿದ್ದು ಕಂಡು ಬಂದಿತ್ತು.
FAKE ACCOUNT pic.twitter.com/BkdyTKF4De
— Aditi Ravindranath (@aditi1231) June 2, 2021
ಮಣಿರತ್ನಂ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದು, ಅವರು ಪ್ರಸ್ತುತ ಬಹುತಾರಾಗಣದ ‘ಪೊನ್ನಿಯಿನ್ ಸೆಲ್ವನ್‘ ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಐಶ್ವರ್ಯ ರೈ ಬಚ್ಚನ್, ಚಿಯಾನ್ ವಿಕ್ರಮ್, ತ್ರಿಶಾ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಚಿತ್ರಿಕರಣ ಸ್ಥಗಿತಗೊಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.