ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

ಚಿಕಂಕರಿ ಕಸೂತಿಯಲ್ಲಿ ತೊಡಗಿಸಿಕೊಂಡ ಮಹಿಳೆಯರ ಕಥೆ ಆಲಿಸಿದ ನಟಿ ತಾಪ್ಸಿ ಪನ್ನು

Published : 16 ಫೆಬ್ರುವರಿ 2026, 15:11 IST
Last Updated : 16 ಫೆಬ್ರುವರಿ 2026, 15:11 IST
ಫಾಲೋ ಮಾಡಿ
Comments
ಐತಿಹಾಸಿಕ ಮಹತ್ವದ ಸ್ಥಳಗಳಿಗೆ ಆಗಾಗ ಭೇಟಿ ನೀಡುವ ಮರೂಫ್ ಉಮರ್ ಅವರ ಜೊತೆ ತಾಪ್ಸಿ ಪನ್ನು ಕಸೂತಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಭೇಟಿ ಮಾಡಿದ್ದಾರೆ.

ಚಿತ್ರ: ಇನ್‌ಸ್ಟಾಗ್ರಾಂ

ADVERTISEMENT
ಲಖನೌದ ಅನೇಕ ಮಹಿಳೆಯರು ಚಿಕಂಕರಿ ಕಸೂತಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸೀರೆ, ಬಟ್ಟೆಗಳ ಮೇಲೆ ಸಾಂಪ್ರದಾಯಿಕ ಶೈಲಿಯಲ್ಲಿ ಕೈಗಳಿಂದ ರಚಿಸುವ ಚಿಕಂಕರಿ ಕಸೂತಿ ಇಲ್ಲಿನ ವಿಶೇಷತೆಯಾಗಿದೆ.

ಸೀರೆಗಳ ವಿನ್ಯಾಸದಿಂದ ಪ್ರಸಿದ್ಧಿ ಪಡೆದಿರುವ ಲಖನೌದ ಚಿಕಂಕರಿ ಕಸೂತಿ ಕೈಗಾರಿಕಾ ಕ್ಷೇತ್ರಕ್ಕೆ ನಟಿ ತಾಪ್ಸಿ ಪನ್ನು ಅವರು ಭೇಟಿ ನೀಡಿದ್ದಾರೆ. ಕಸೂತಿ ಕೆಲಸ ಮಾಡುವ ಮಹಿಳೆಯರ ಜೊತೆಗಿನ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಕಸೂತಿಯನ್ನೇ ವೃತ್ತಿಯಾಗಿಸಿಕೊಂಡಿರುವ ಮಹಿಳೆಯರನ್ನು ಭೇಟಿಮಾಡಿ, ಅವರ ಕಥೆಗಳಿಗೆ ಕಿವಿಯಾಗಿದ್ದಾರೆ. ಜತೆಗೆ ಚಿಕಂಕರಿ ಕೆಲಸದ ಬಗ್ಗೆ ಚರ್ಚಿಸಿದ್ದಾರೆ.

ಕಸೂತಿ ಮಾಡುವವರೊಂದಿಗೆ ತಾಪ್ಸಿ ಪನ್ನು ಅವರು ಫೋಟೊ ಕ್ಲಿಕ್ಕಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ

ಕಸೂತಿ ಮಾಡುವವರನ್ನು ಭೇಟಿ ಮಾಡಿದ ತಾಪ್ಸಿ ಪನ್ನು ಅವರಿಗೆ ಉಮರ್ ಅವರು ಕೃತಜ್ಞತೆ ತಿಳಿಸಿದ್ದಾರೆ. 'ಇಂತಹ ಧ್ವನಿಗಳಿಗೆ ಮುಖ್ಯ ವೇದಿಕೆಯಲ್ಲಿ ಅವಕಾಶ ಸಿಕ್ಕಾಗ ಮಾತ್ರ ಬದಲಾವಣೆ ಕಾಣಬಹುದು’ ಎಂದಿದ್ದಾರೆ

ಉಮರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಾಪ್ಸಿ ಪನ್ನು ಅವರ ಜೊತೆಗಿನ ಕ್ಷಣಗಳನ್ನು ಶೇರ್ ಮಾಡಿಕೊಂಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT