ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಲೇಪಿತ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಊರ್ವಶಿ ರೌಟೇಲಾ

Published 25 ಫೆಬ್ರುವರಿ 2024, 10:11 IST
Last Updated 25 ಫೆಬ್ರುವರಿ 2024, 10:11 IST
ಅಕ್ಷರ ಗಾತ್ರ

ಮುಂಬೈ: ನಟಿ ಊರ್ವಶಿ ರೌಟೇಲಾ 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರ್‍ಯಾಪರ್‌ ಯೋ ಯೋ ಹನಿ ಸಿಂಗ್‌ ಅವರು ಊರ್ವಶಿ ಅವರಿಗೆ 24 ಕ್ಯಾರೆಟ್‌ ಚಿನ್ನ ಲೇಪಿತ ಕೇಕ್‌ ಅನ್ನು ಉಡುಗೊರೆಯಾಗಿ ನೀಡಿದ್ದು, ಅದನ್ನು ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ. 

ಹುಟ್ಟುಹಬ್ಬ ಆಚರಿಸಿಕೊಂಡ ಫೋಟೊಗಳನ್ನು ಊರ್ವಶಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೊದಲ್ಲಿ, ಹನಿ ಸಿಂಗ್‌ ಅವರು ಪಕ್ಕದಲ್ಲಿ ನಿಂತಿದ್ದು, ಊರ್ವಶಿ ಕೇಕ್‌ ಕತ್ತರಿಸಿದ್ದಾರೆ. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗಿದೆ.

ಊರ್ವಶಿ ಮತ್ತು ಹನಿ ಸಿಂಗ್‌ ಎರಡನೇ ಬಾರಿಗೆ ಜೊತೆಯಾಗಿ ‘ಸೆಕೆಂಡ್‌ ಡೋಸ್‌‘ ಅಥವಾ ‘ವಿಗ್ಡಿಯನ್ ಹೀರಿಯನ್’ ವಿಡಿಯೊ ಆಲ್ಬಮ್‌ ತಯಾರಿಸಿದ್ದಾರೆ.

ಈ ಹಿಂದೆ 2014ರಲ್ಲಿ ಇವರಿಬ್ಬರೂ ಜೊತೆಯಾಗಿ ಹೊರತಂದಿದ್ದ ವಿಡಿಯೊ ಆಲ್ಬಮ್‌ ‘ಲವ್‌ ಡೋಸ್‌’ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಏತನ್ಮಧ್ಯೆ, ಊರ್ವಶಿ ಅವರು ಅಕ್ಷಯ್ ಕುಮಾರ್ ಅವರೊಂದಿಗೆ ‘ವೆಲ್ಕಮ್ 3’, ಬಾಬಿ ಡಿಯೋಲ್, ದುಲ್ಕರ್ ಸಲ್ಮಾನ್, ನಂದಮೂರಿ ಬಾಲಕೃಷ್ಣ ಅವರೊಂದಿಗೆ ‘ಎನ್‌ಬಿಕೆ109’, ಮತ್ತು ಸನ್ನಿ ಡಿಯೋಲ್ ಮತ್ತು ಸಂಜಯ್ ದತ್ ಅವರೊಂದಿಗೆ ‘ಬಾಪ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT