ಭಾನುವಾರ, ಏಪ್ರಿಲ್ 11, 2021
33 °C

‘ಅಧ್ಯಕ್ಷ ಇನ್ ಅಮೆರಿಕ’ ಟ್ರೇಲರ್‌ ಶನಿವಾರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಗಿಣಿ ದ್ವಿವೇದಿ ಮತ್ತು ಶರಣ್ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾದ ಟ್ರೇಲರ್‌ ಇದೇ 27ರಂದು ಮಧ್ಯಾಹ್ನ 2 ಗಂಟೆಗೆ ಬಿಡುಗಡೆಯಾಗಲಿದೆ.

ಈ ಬಗ್ಗೆ ನಟ ಶರಣ್‌ ಅಧಿಕೃತವಾಗಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಯೋಗಾನಂದ್ ಮುದ್ದಾನ್‌ ಅವರದ್ದು. ಸಂಗೀತ ವಿ.ಹರಿಕೃಷ್ಣ, ಛಾಯಾಗ್ರಹಣ ಸುಧಾಕರ್‌ ಎಸ್‌.ರಾಜ್‌, ಸಿದ್ಧಾರ್ಥ ರಾಮಸ್ವಾಮಿ, ಅನಿಶ್‌ ತರುಣ್‌ ಕುಮಾರ್‌ ಅವರದ್ದು. ಟಿ.ಜಿ.ವಿಶ್ವಪ್ರಸಾದ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ರಾಗಿಣಿ ಇದೇ ಮೊದಲ ಬಾರಿಗೆ ಎಂಬಂತೆ ಪಕ್ಕಾ ಹಾಸ್ಯಮಯ ಪಾತ್ರದಲ್ಲಿ ಕಾಣಿಸಿದ್ದಾರೆ. ಜೊತೆಗೆ ಒಂದಿಷ್ಟು ಬೋಲ್ಡ್‌ ಆಗಿಯೂ ಕಾಣಿಸಿಕೊಂಡಿದ್ದಾರಂತೆ. ಹಾಸ್ಯಮಯ ಸಂಭಾಷಣೆಗಳು ಚಿತ್ರದುದ್ದಕ್ಕೂ ಇವೆಯಂತೆ. ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಆಗಸ್ಟ್‌ನಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು