ಸೋಮವಾರ, ಮೇ 23, 2022
21 °C

ಆದಿಪುರುಷ್: ಮಾನವೀಯ ಲಂಕೇಶ್ ಪಾತ್ರ ಸಮರ್ಥಿಸಿದ ‘ರಾವಣ’ ಸೈಫ್!

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸುತ್ತಿರುವ ಬಿಗ್ ಬಜೆಟ್ 'ಆದಿಪುರುಷ್' ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಬಣ್ಣ ಹಚ್ಚಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ಸ್ಟಾರ್, ರಾಕ್ಷಸ ರಾಜ ರಾವಣನ ಪಾತ್ರವನ್ನು ಹೆಚ್ಚು ಮಾನವೀಯ ಗುಣಗಳೊಂದಿಗೆ ಪ್ರಸ್ತುತಪಡಿಸುವುದಾಗಿ ಹೇಳಿದ್ದಾರೆ.

ಓಂ ರಾವುತ್ ನಿರ್ದೇಶನದ ಪೌರಾಣಿಕ ಮಹಾಕಾವ್ಯ 'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಭಗವಾನ್ ರಾಮನ ಪಾತ್ರದಲ್ಲಿ ನಟಿಸಲಿದ್ದು, ಸೈಫ್ ಅಲಿ ಖಾನ್ ರಾವಣನ ಲಂಕೇಶ್ ಪಾತ್ರವನ್ನು ನಿಭಾಯಿಸಲಿದ್ದಾರೆ.

ರಾವುತ್ ಅವರೊಂದಿಗೆ ಸೈಫ್ ಅಲಿ ಖಾನ್ ಎರಡನೇ ಬಾರಿಗೆ ನಟಿಸುತ್ತಿದ್ದಾರೆ. 'ತೆನ್ನಾಲಿ ದಿ ಅನ್‌ಸಂಗ್ ವಾರಿಯರ್' ಚಿತ್ರದಲ್ಲಿ ಸೈಫ್ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದರು. ಆದಿಪುರುಷ್ ಸೈಫ್ ಪಾಲಿಗೆ ಬಿಗ್ ಬ್ರೇಕ್ ನೀಡುವ ನಿರೀಕ್ಷೆಯಿದೆ. ಅಲ್ಲದೆ ರಾವಣನ ಜೀವನವನ್ನು ಸಮರ್ಥಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

'ರಾಕ್ಷಸ ರಾಜ ರಾವಣನ ಪಾತ್ರದಲ್ಲಿ ನಟಿಸುವುದು ತುಂಬಾನೇ ಕುತೂಹಲವನ್ನುಂಟು ಮಾಡಿದೆ. ಆದರೆ ನಾವು ಅವರನ್ನ ಹೆಚ್ಚು ಮಾನವೀಯರನ್ನಾಗಿ ಮಾಡಲಿದ್ದು, ಮನರಂಜನಾ ಅಂಶವನ್ನು ಹೆಚ್ಚಿಸಲಿದ್ದೇವೆ. ಸೀತಾ ದೇವಿಯನ್ನು ಅಪಹರಿಸಿದ್ದು, ರಾಮ ದೇವರ ವಿರುದ್ಧದ ಯುದ್ಧ ಮತ್ತು ತನ್ನ ಸಹೋದರಿ ಶೂರ್ಪನಖಿಗೆ ಲಕ್ಷ್ಮಣನು ಮೂಗು ಕತ್ತರಿಸಿರುವುದಕ್ಕೆ ಪ್ರತೀಕಾರವಾಗಿ ಸಮರ್ಥಿಸುತ್ತಾನೆ' ಎಂದು ಹೇಳಿದ್ದಾರೆ.

ಆದಿಪುರುಷ್ ಚಿತ್ರೀಕರಣ 2021ರಲ್ಲಿ ಆರಂಭವಾಗಲಿದೆ ಎಂದು ವರದಿಯಾಗಿದೆ. ಸಂಪೂರ್ಣ 3ಡಿ ರೂಪದಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಇರಿಸಿಕೊಳ್ಳಲಾಗಿದೆ. ಏಕಕಾಲಕ್ಕೆ ಐದಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆ ಕಾಣಲಿದೆ.

ಸೀತಾ ಮಾತೆಯ ಪಾತ್ರಕ್ಕೆ ಕೃತಿ?
ಅದೆ ಹೊತ್ತಿಗೆ ಸೀತಾ ಮಾತೆಯ ಪಾತ್ರದಲ್ಲಿ ನಟಿ ಕೃತಿ ಸನೋನ್ ಬಣ್ಣ ಹಚ್ಚುವ ಸಾಧ್ಯತೆಗಳಿವೆ. ಈ ಪಟ್ಟಿಯಲ್ಲಿ ಅನೇಕ ನಟಿಯರ ಹೆಸರುಗಳು ಸಾಲು ಸಾಲಾಗಿ ಕೇಳಿಬಂದಿದ್ದವು. ಕೊನೆಗೆ ಕೃತಿಗೆ ಅವಕಾಶ ಒಲಿಯದಿದೆ ಎಂಬುದು ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು