ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಂಕಷ್ಟ: ಸಿನಿಮಾ ಕ್ಷೇತ್ರದ ಕಾರ್ಮಿಕರಿಗೆ ಆದಿತ್ಯ ಚೋಪ್ರಾ ನೆರವು

‘ಯಶ್‌ ಚೋಪ್ರಾ ಸಾಥಿ’ ಮೂಲಕ ಮಹಿಳೆಯರು ಹಿರಿಯ ನಾಗರಿಕರಿಗೆ ಹಣ, ಪಡಿತರ ಸಹಾಯ
Last Updated 7 ಮೇ 2021, 6:57 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್‌ 19 ಎರಡನೇ ಅಲೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಚಲನಚಿತ್ರ ಕ್ಷೇತ್ರದ ದಿನಗೂಲಿ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಲು ಬಾಲಿವುಡ್‌ ಸಿನಿಮಾ ನಿರ್ಮಾಪಕ ಆದಿತ್ಯ ಚೋಪ್ರಾ ಅವರು ‘ಯಶ್‌ ಚೋಪ್ರಾ ಸಾಥಿ’ ಎಂಬ ಯೋಜನೆ ಆರಂಭಿಸಿದ್ದಾರೆ.

‘ಯಶ್‌ ಚೋಪ್ರಾ ಸಾಥಿ‘ ಕಾರ್ಯಕ್ರಮದ ಅಡಿಯಲ್ಲಿ ಯಶ್‌ ಚೋಪ್ರಾ ಫೌಂಡೇಷನ್‌, ಸಿನಿಮಾ ಕ್ಷೇತ್ರದಲ್ಲಿ ದುಡಿಯು ತ್ತಿರುವ ಮಹಿಳಾ ನೌಕರರು ಮತ್ತು ಹಿರಿಯ ನಾಗರಿಕರಿಗೆ ತಲಾ ₹5ಸಾವಿರ ನಗದು ನೀಡಲಿದೆ. ಜತೆಗೆ, ಯೂತ್‌ ಫೀಡ್ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆಯ ಪಾಲುದಾರಿಕೆಯೊಂದಿಗೆ ನಾಲ್ವರು ಸದಸ್ಯರಿರುವ ಕಾರ್ಮಿಕರ ಪ್ರತಿ ಕುಟುಂಬಕ್ಕೆ ತಿಂಗಳು ಪೂರ್ತಿ ಉಚಿತ ಪಡಿತರವನ್ನು ವಿತರಿಸಲಿದೆ.

ದಿ ಫೆಡರೇಷನ್ ಆಫ್ ವೆಸ್ಟರ್ನ್‌ ಇಂಡಿಯಾ ಸಿನಿ ಎಂಪ್ಲಾಯೀಸ್‌(ಎಫ್‌ಡಬ್ಲ್ಯುಐಸಿಇ) ಒಕ್ಕೂಟದಲ್ಲಿ ಸುಮಾರು 2.5 ಲಕ್ಷ ನೋಂದಾಯಿತ ನೌಕರರಿದ್ದಾರೆ.

ಈ ಸೇವೆಯ ಉಪಯೋಗ ಪಡೆದುಕೊಳ್ಳುವುದಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಿ, ಈ ಸೌಲಭ್ಯ ಪಡೆಯಬಹುದು ಎಂದು ಪ್ರೊಡಕ್ಷನ್ ಹೌಸ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಐವತ್ತು ವರ್ಷಗಳಿಂದ ಹಿಂದಿ ಚಲನಚಿತ್ರೋದ್ಯಮದ ಅವಿಭಾಜ್ಯ ಅಂಗವಾಗಿರುವ ಕಾರ್ಮಿಕರಿಗೆ ನಮ್ಮ ಪ್ರತಿಷ್ಠಾನದಿಂದ ಅಗತ್ಯ ಸೌಲಭ್ಯಗಳನ್ನು ನೀಡುತ್ತಿದ್ದೇವೆ‘ ಎಂದು ಯಶ್ ರಾಜ್ ಪಿಲ್ಮ್ಸ್‌ ಹಿರಿಯ ಉಪಾಧ್ಯಕ್ಷ ಅಕ್ಷಯ್ ವಿಧಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT