ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Tiger 3: ನವೆಂಬರ್ 12ರಂದು ಟೈಗರ್​ 3 ಬಿಡುಗಡೆ– ಮುಂಗಡ ಬುಕಿಂಗ್ ಆರಂಭ

ಈ ವರ್ಷ ದೀಪಾವಳಿ ಪ್ರಯುಕ್ತ ನ. 12ರಂದು ‘ಟೈಗರ್​ 3’ ಚಿತ್ರ ಬಿಡುಗಡೆಯಾಗಲಿದೆ.
Published 5 ನವೆಂಬರ್ 2023, 10:31 IST
Last Updated 5 ನವೆಂಬರ್ 2023, 10:31 IST
ಅಕ್ಷರ ಗಾತ್ರ

ಮುಂಬೈ: ಬಹುನಿರೀಕ್ಷಿತ ಸಿನಿಮಾಗಳು ತೆರೆಕಾಣುವಾಗ ಅದಕ್ಕೆ ತಕ್ಕನಾದ ಸಿದ್ಧತೆ ಅಗತ್ಯ. ಈ ವಿಚಾರದಲ್ಲಿ ‘ಟೈಗರ್​ 3’ ಚಿತ್ರದ ನಿರ್ದೇಶಕ ಮನೀಶ್​ ಶರ್ಮಾ ಕೂಡ ಹಿಂದೆ ಬಿದ್ದಿಲ್ಲ. ಸಾಕಷ್ಟು ಪ್ರಚಾರದೊಂದಿಗೆ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಈಗ ಚಿತ್ರತಂಡ ಇಂದಿನಿಂದ (ಭಾನುವಾರ) ‌‌ಮುಂಗಡ ಬುಕಿಂಗ್​ ಆರಂಭಿಸಿದ್ದು, ಭರ್ಜರಿ ಓಪನಿಂಗ್​ ಪಡೆಯುವ ಸೂಚನೆ ಸಿಕ್ಕಿದೆ.

ಮನೀಶ್ ಶರ್ಮಾ ನಿರ್ದೇಶನದ ಟೈಗರ್​ 3 ಚಿತ್ರ ನ.12ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ ಎಂದು ‘ಯಶ್​ ರಾಜ್​ ಫಿಲ್ಮ್ಸ್ (ವೈಆರ್‌ಎಫ್‌) ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ಚಿತ್ರದಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್ ಜೋಡಿಯಾಗಿ ನಟಿಸಿದ್ದಾರೆ.

ಈಗಾಗಲೇ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಯಾಗಿದೆ. ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಚಿತ್ರದಲ್ಲಿ ಶಾರುಖ್​ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇಮ್ರಾನ್​ ಹಷ್ಮಿ ವಿಲನ್​ ಆಗಿ ನಟಿಸಿರುವುದು ವಿಶೇಷ. ನ.12ರಂದು ಹಿಂದಿ, ತೆಲುಗು ಹಾಗೂ ಮತ್ತು ತಮಿಳಿನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT