ಶುಕ್ರವಾರ, ಅಕ್ಟೋಬರ್ 22, 2021
29 °C

ಶಾರುಕ್‌ ಪಾರ್ಟಿಯಲ್ಲಿ ಸ್ಟಾರ್‌ ನಟರ ಪತ್ನಿಯರಿಂದ ಡ್ರಗ್ಸ್‌ ಸೇವನೆ: ಶೆರ್ಲಿನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ಡ್ರಗ್ಸ್‌ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು ನಟ ಶಾರುಕ್‌ ಖಾನ್‌ ಆಯೋಜಿಸುತ್ತಿದ್ದ ಕೆಕೆಆರ್‌ ಪಾರ್ಟಿಯಲ್ಲಿ ಬಾಲಿವುಡ್ ನಟರ ಪತ್ನಿಯರು ಡ್ರಗ್ಸ್‌ ಸೇವಿಸುತ್ತಿದ್ದರು ಎಂದು ನಟಿ ಶೆರ್ಲಿನ್‌ ಚೋಪ್ರಾ ಹೇಳಿದ್ದಾರೆ. 

ನಟ ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಪ್ರಕರಣದ ಬಳಿಕ ಬಾಲಿವುಡ್‌ನಲ್ಲಿ ಡ್ರಗ್ಸ್‌ ಜಾಲದ ಬಗ್ಗೆ ತನಿಖೆ ನಡೆಯುತ್ತಿದ್ದು ಹಲವು ನಟ ನಟಿಯರು ಈ ಜಾಲದಲ್ಲಿ ಸಿಲುಕಿದ್ದಾರೆ. ಹಲವು ತಿಂಗಳುಗಳ ಹಿಂದೆಯೇ ಶೆರ್ಲಿನ್‌ ಚೋಪ್ರಾ ಅವರು ಶಾರುಕ್‌ ಖಾನ್‌ ಆಯೋಜಿಸುತ್ತಿದ್ದ ಕೆಕೆಆರ್‌ ಪಾರ್ಟಿಯಲ್ಲಿ ಕೊಕೇನ್ ಸರಬರಾಜುಗುತ್ತಿತ್ತು ಎಂದು ವಿಡಿಯೊ ಮೂಲಕ ಹೇಳಿಕೆ ನೀಡಿದ್ದರು.

ಶಾರುಕ್‌ ಪುತ್ರ ಆರ್ಯನ್‌ ಬಂಧನದ ಬಳಿಕ ಅದೇ ವಿಡಿಯೊವನ್ನು ಶೆರ್ಲಿನ್ ಚೋಪ್ರಾ ಮತ್ತೆ ಶೇರ್‌ ಮಾಡಿದ್ದಾರೆ. ಅದರಲ್ಲಿ ಐಪಿಎಲ್‌ನ ಕೆಕೆಆರ್‌ ಪಾರ್ಟಿಯಲ್ಲಿ ನಾನು ಡ್ಯಾನ್ಸ್‌ ಮಾಡುತ್ತಿದ್ದೆ. ಪಾರ್ಟಿಯ ಮಧ್ಯದಲ್ಲಿ ಶೌಚಾಲಯಕ್ಕೆ ಹೋದಾಗ ಅಲ್ಲಿ ಬಾಲಿವುಡ್‌ನ ಸ್ಟಾರ್‌ ನಟಿಯರ ಪತ್ನಿಯರು ಕೊಕೇನ್‌ ಸೇವಿಸಿ ಮತ್ತಿನಲ್ಲಿ ಇರುತ್ತಿದ್ದರು ಎಂದು ಶೆರ್ಲಿನ್‌ ಆ ವಿಡಿಯೊದಲ್ಲಿ ಹೇಳಿದ್ದಾರೆ. 

ಶಾರುಕ್‌ ಅವರ ಪ್ರತಿ ಪಾರ್ಟಿಯಲ್ಲಿ ನಶೆ ಇರುತ್ತಿತ್ತು. ನಾನು ನಿಧಾನವಾಗಿ ಕೆಕೆಆರ್‌ ಪಾರ್ಟಿಗಳಿಂದ ದೂರವಾದೆ ಎಂದು ಅವರು ಹೇಳಿದ್ದಾರೆ. ಬಾಲಿವುಡ್‌ನಲ್ಲಿ ಇಂತಹ ಪಾರ್ಟಿಗಳು ಇರುತ್ತವೆ ಎಂಬುದು ನನಗೆ ಆಗ ಅರ್ಥವಾಯಿತು ಎಂದು ಶೆರ್ಲಿನ್‌ ಹೇಳಿದ್ದಾರೆ. 

ಅರ್ಯನ್‌ ಬಂಧನದ ಬಳಿಕ ಶೆರ್ಲಿನ್‌ ಅವರು ವಿಡಿಯೊವನ್ನು ಮತ್ತೆ ಶೇರ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಹಾಗೇ ಎನ್‌ಸಿಬಿ ತನಿಖೆಗೆ ಮತ್ತೊಂದು ಆಯಾಮ ಸಿಗಬಹುದು ಎನ್ನಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು