ಗುರುವಾರ , ಫೆಬ್ರವರಿ 9, 2023
30 °C

ಮಗಳು ಆರಾಧ್ಯಳ ಜನ್ಮದಿನ: ‘ಮೈ ಲವ್ ಮೈ ಲೈಫ್’ ಎಂದ ಐಶ್ವರ್ಯಾ ರೈ ಬಚ್ಚನ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ತಮ್ಮ ಮಗಳು ಆರಾಧ್ಯ ಎಂದರೆ ಪಂಚಪ್ರಾಣ. ಬಿಡುವಿನ ವೇಳೆಯಲ್ಲಿ ಮಗಳೊಂದಿಗೆ ಕಾಲ ಕಳೆಯುವ ಅವರು ಸದಾ ಆರಾಧ್ಯಳ ತುಂಟಾಟವನ್ನು ಬಯಸುತ್ತಾರೆ.

ಇದೀಗ ಮಗಳ 11 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಐಶ್ವರ್ಯಾ, ಆರಾಧ್ಯ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಿದ್ದು, ಮಗಳಿಗೆ ಚುಂಬನ ಕೊಟ್ಟು ಪ್ರೀತಿ ವ್ಯಕ್ತಪಡಿಸಿದ್ದಾರೆ.

ಈ ಫೋಟೊವನ್ನು ಅಭಿಮಾನಿಗಳು ಸಾಕಷ್ಟು ಮೆಚ್ಚಿಕೊಂಡಿದ್ದು, ತಾಯಿಗೆ ತಕ್ಕ ಮಗಳು ಆರಾಧ್ಯಾ ಎಂದು ಹಲವರು ಕಮೆಂಟ್‌ಗಳನ್ನು ಮಾಡಿದ್ದಾರೆ. ಇದೇ ವೇಳೆ ಹಲವರು ಈ ಫೋಟೊವನ್ನು ಟ್ರೋಲ್ ಮಾಡಿದ್ದಾರೆ. ಇನ್ನು ಲಿಪ್ ಕಿಸ್ ಸರಿ ಅಲ್ಲ, ಅದು ಮಕ್ಕಳಿಗೆ ಸೋಂಕು ತಗುಲಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಐಶ್ವರ್ಯಾ ಅವರು ‘ಮೈ ಲವ್ ಮೈ ಲೈಫ್’ ಎಂದು ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಈ ವಿಶೇಷ ಫೋಟೊ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದ್ದು ಆರಾಧ್ಯಳಿಗೆ ಬಾಲಿವುಡ್ ಸೇರಿದಂತೆ ಚಿತ್ರರಂಗಗಳ ಅನೇಕರು ಶುಭಾಶಯ ಕೋರುತ್ತಿದ್ದಾರೆ.

 

2007 ರಲ್ಲಿ ನಟ ಅಭಿಷೇಕ್ ಬಚ್ಚನ್ ಅವರನ್ನು ವರಿಸಿದ್ದ ಐಶ್ವರ್ಯಾ ಅವರು 2011 ನವೆಂಬರ್ 16 ರಂದು ಆರಾಧ್ಯಳಿಗೆ ಜನ್ಮ ನೀಡಿದ್ದರು.

ಇನ್ನು ರೈ ಅವರು ಇಂದಿಗೂ ಕೂಡ ನಟನೆಯಲ್ಲಿ ತೊಡಗಿಸಿಕೊಂಡಿದ್ದು ಅವರ ಇತ್ತೀಚಿನ ‘ಪೊನ್ನಿಯನ್ ಸೆಲ್ವನ್’ ಚಿತ್ರ ಬಿಡುಗಡೆಯಾಗಿ ಸದ್ದು ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು