ಪುಟ್ಟ ಮಗುವಾಗಿದ್ದಾಗಿನಿಂದಲೂ ಆರಾಧ್ಯ ಬಚ್ಚನ್ ಅಮ್ಮನನ್ನು ಹೆಚ್ಚು ಹಚ್ಚಿಕೊಂಡೇ ಬೆಳೆದವಳು. ಬಾಲಿವುಡ್ನಲ್ಲಿ ಇನ್ನೂ ಬೇಡಿಕೆ ಉಳಿಸಿಕೊಂಡಿರುವ ಐಶ್ವರ್ಯಾ ರೈ ಬಚ್ಚನ್ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಮಗಳನ್ನು ಜತೆಯಾಗಿ ಕರೆದುಕೊಂಡು ಹೋಗುವ ಅಭ್ಯಾಸ ಹೊಂದಿದ್ದಾರೆ. ಈ ಅಭ್ಯಾಸವೇ ಐಶು ವಿರುದ್ಧ ನೆಟ್ಟಿಗರ ಟ್ರೋಲ್ಗೆ ಕಾರಣವಾಗಿದೆ.

ಪುಟಾಣಿ ಆರಾಧ್ಯ ಬಚ್ಚನ್ ಅಮ್ಮನನ್ನು ಬಿಟ್ಟಿರಲಾರಳು ಒಪ್ಪುತ್ತೇವೆ. ಆದರೆ, ಎಲ್ಲೆ ಜತೆಯಾಗಿ ಹೋದರೂ ಐಶು ಮಾತ್ರ ಆರಾಧ್ಯಳ ಕೈ ಹಿಡಿದುಕೊಂಡೇ ಇರುತ್ತಾರೆ. ಆರಾಧ್ಯಳೇನೂ ತೈಮೂರ್ ಕಪೂರ್ನಂತೆ ಚಿಕ್ಕ ಮಗುವೇ? ಅಷ್ಟು ಪುಟ್ಟ ತೈಮೂರೇ ಒಬ್ಬನೇ ಓಡಾಡುವಾಗ ಎಂಟು ವರ್ಷದ ಆರಾಧ್ಯಳ ಕೈ ಹಿಡಿದುಕೊಂಡು ಐಶ್ ಓವರ್ ಪ್ರೊಟೆಕ್ಟಿವ್ ಆಗಿರುವುದೇಕೆ? ಎಂದೆಲ್ಲಾ ನೆಟ್ಟಿಗರು ಐಶುವನ್ನು ಪ್ರಶ್ನಿಸಿದ್ದಾರೆ.

ಕೆಲವರಂತೂ ಇನ್ನೂ ಮುಂದೆ ಹೋಗಿ ಆರಾಧ್ಯಳಿಗೆ ಕಣ್ಣು ಕಾಣುವುದಿಲ್ಲವೇ? ಆ ಕಾರಣಕ್ಕಾಗಿಯೇ ಐಶು ಮಗಳು ಕೈತಪ್ಪಿ ಹೋಗಬಾರದೆಂದು ಕೈ ಹಿಡಿದುಕೊಂಡಿರುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಈಚೆಗಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಐಶ್ವರ್ಯಾ–ಅಭಿಷೇಕ್, ತಮ್ಮ ಜತೆಗೆ ಮುದ್ದುಮಗಳನ್ನೂ ವಿದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಐಶು–ಆರಾಧ್ಯ ಇಬ್ಬರೂ ಜತೆಯಾಗಿ ಹಾಲಿಡೇ ಅನ್ನು ಎಂಜಾಯ್ ಮಾಡಿದ್ದರು. ವಿದೇಶದಿಂದ ಬಂದಮೇಲೆ ಐಶು ಸಮಾರಂಭವೊಂದಕ್ಕೆ ಆರಾಧ್ಯಳನ್ನು ಕರೆದುಕೊಂಡು ಹೋಗಿದ್ದಾಗ ಫೋಟೊಗ್ರಾಫರ್ಗಳ ಕಣ್ಣು ತಪ್ಪಿಸಿಕೊಳ್ಳಲು ಆರಾಧ್ಯಳ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ದೊಡ್ಡದೊಡ್ಡ ಹೆಜ್ಜೆ ಹಾಕುತ್ತಾ ಕಾರಿನೊಳಗೆ ಕುಳಿತಿದ್ದರು. ಈ ಚಿತ್ರವನ್ನು ನೋಡಿದ ಬಹುತೇಕರು ಐಶು ತಮ್ಮ ಮಗಳಿಗೆ ಓವರ್ ಪ್ರೊಟೆಕ್ವಿವ್ ತಾಯಿಯಂತೆ ವರ್ತಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಿದ್ದಾರೆ. ಅಷ್ಟೇ ಅಲ್ಲ ಐಶು ತನ್ನಂತೆ ಮಗಳಿಗೂ ಡಯೆಟ್ ಮಾಡಿಸುತ್ತಿದ್ದಾರೆ ಅನ್ಸುತ್ತೆ. ನೋಡಿ ಆರಾಧ್ಯ ಹೇಗೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾಳೆ ಎಂದೂ ಕೆಲವರು ಐಶು ಕಾಲೆಳೆದಿದ್ದಾರೆ.

ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಐಶ್ವರ್ಯಾ ಎಂದಿನಂತೆ ತಮ್ಮ ತಾಯ್ತನದ ಕರ್ತವ್ಯವನ್ನು ಪಾಲಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.