ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ದೃಶ್ಯಂ 2’ ಹಿಂದಿ ಚಿತ್ರದ ಶೂಟಿಂಗ್‌ ಆರಂಭ: ಫೋಟೊ ಹಂಚಿಕೊಂಡ ಅಜಯ್‌ ದೇವಗನ್‌

Published : 17 ಫೆಬ್ರುವರಿ 2022, 12:45 IST
ಫಾಲೋ ಮಾಡಿ
Comments

ಬೆಂಗಳೂರು: ‘ದೃಶ್ಯಂ 2’ ಹಿಂದಿ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ತೆಗೆದ ಫೋಟೊವನ್ನು ನಟ ಅಜಯ್‌ ದೇವಗನ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮಲಯಾಳಂ ಚಿತ್ರದ ರಿಮೇಕ್‌ನಲ್ಲಿ ಅಜಯ್‌ ದೇವಗನ್‌, ಶ್ರೇಯಾ ಶರಣ್‌, ಟಬು ಹಾಗೂ ಇಶಿತಾ ದತ್ತಾ ಅವರು ಅಭಿನಯಿಸಲಿದ್ದಾರೆ.

ನಟಿ ಶ್ರೇಯಾ ಶರಣ್‌, ನಿರ್ದೇಶಕ ಅಭಿಷೇಕ್‌ ಪಾಠಕ್‌ ಹಾಗೂ ಅಜಯ್‌ ದೇವಗನ್‌ ಅವರು ಶೂಟಿಂಗ್‌ನಲ್ಲಿ ತಲ್ಲೀಣರಾಗಿರುವುದು ಫೋಟೊದಲ್ಲಿ ಕಂಡುಬರುತ್ತದೆ.

‘ವಿಜಯ್ ತನ್ನ ಕುಟುಂಬವನ್ನು ಮತ್ತೆ ರಕ್ಷಿಸಬಹುದೇ? ದೃಶ್ಯಂ 2 ಚಿತ್ರೀಕರಣ ಪ್ರಾರಂಭವಾಗಿದೆ’ ಎಂದು ಅಜಯ್‌ ದೇವಗನ್‌ ಬರೆದುಕೊಂಡಿದ್ದಾರೆ. ಟಬು ಹಾಗೂ ಶ್ರೇಯಾ ಶರಣ್‌ ಅವರನ್ನು ಟ್ಯಾಗ್‌ ಮಾಡಿದ್ದಾರೆ.

ಮಲಯಾಳಂನ ‘ದೃಶ್ಯಂ 2’ ಚಿತ್ರದಲ್ಲಿ ಮೋಹನ್‌ ಲಾಲ್‌ ಮತ್ತು ಮೀನಾ ನಟಿಸಿದ್ದರು. ಇದನ್ನು ಜೀತು ಜೋಸೆಫ್‌ ನಿರ್ದೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT