ಸೋಮವಾರ, ಮಾರ್ಚ್ 1, 2021
20 °C

ರಚಿತಾ ರಾಮ್ ಹಾಗೂ ಅಜಯ್‌ ರಾವ್ ನಟನೆಯ ಲವ್‌ ಯೂ ರಚ್ಚು ಫಸ್ಟ್‌ಲುಕ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಅಜಯ್‌ ರಾವ್‌ ನಟನೆಯ ‘ಲವ್‌ ಯೂ ರಚ್ಚು’ ಚಿತ್ರದ ಫಸ್ಟ್‌ಲುಕ್ ಇಂದು ಬಿಡುಗಡೆಯಾಗಿದೆ. ಅಜಯ್‌ ರಾವ್‌ ಹುಟ್ಟುಹಬ್ಬದ ದಿನವಾದ ಇಂದು ಫಸ್ಟ್‌ಲುಕ್ ಬಿಡುಗಡೆ ಮಾಡಿದೆ ಚಿತ್ರತಂಡ.

ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫಸ್ಟ್‌ಲುಕ್‌ನ ಪೋಸ್ಟರ್‌ ಹಂಚಿಕೊಂಡಿರುವ ನಿರ್ಮಾಪಕ ಗುರು ದೇಶಪಾಂಡೆ ‘ಎಲ್ಲರಿಗೂ ನಮಸ್ಕಾರ, ಅಜಯ್‌ ರಾವ್ ಹುಟ್ಟಿದ ದಿನವಾದ ಇಂದು ನಮ್ಮ 3ನೇ ಪ್ರಾಜೆಕ್ಟ್‌ ಅನ್ನು ಘೋಷಣೆ ಮಾಡಲು ಸಂತೋಷ ಪಡುತ್ತೇನೆ. ಜಿ ಸಿನಿಮಾ ಬ್ಯಾನರ್‌ ಅಡಿಯಲ್ಲಿ ಲವ್ ಯೂ ರಚ್ಚು ಸಿನಿಮಾ ಮೂಡಿ ಬರುತ್ತಿದೆ. ಇದರಲ್ಲಿ ಅಜಯ್ ರಾವ್ ಹಾಗೂ ರಚಿತಾ ರಾವ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಶಂಕರ್ ಎಸ್‌. ರಾಜ್ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ಫಸ್ಟ್‌ಲುಕ್‌ ಇಲ್ಲಿದೆ. ನಮ್ಮನ್ನು ಹರಸಿ ಹಾರೈಸಿ’ ಎಂದು ಬರೆದುಕೊಂಡಿದ್ದಾರೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು