ಅಜಯ್ ರಾವ್ ನಟನೆಯ ‘ರಾಧೇಯ’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವೇದಗುರು ಆ್ಯಕ್ಷನ್-ಕಟ್ ಹೇಳಿದ್ದಾರೆ.

‘ಮಹಾಭಾರತದ ಕರ್ಣನ ಇನ್ನೊಂದು ಹೆಸರು ‘ರಾಧೇಯ’. ಕರ್ಣನ ಸಾಕು ತಾಯಿ ಹೆಸರು ರಾಧಾ. ಹಾಗಂತ ಆ ಕರ್ಣನಿಗೂ ಈ ಕಥೆಗೂ ಸಂಬಂಧವಿಲ್ಲ. ಆದರೆ ಅವನ ತ್ಯಾಗದ ಅಂಶ ನಮ್ಮ ಚಿತ್ರದಲ್ಲಿದೆ. ರಾಧೇಯ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ, ಅದಕ್ಕಾಗಿ ಏನೆಲ್ಲ ಸಮಸ್ಯೆಗಳನ್ನು ದಾಟಿ ಬರುತ್ತಾನೆ ಎಂಬುದನ್ನು ಪ್ರೇಮಕಥೆಯೊಂದಿಗೆ ಹೇಳಿದ್ದೇನೆ. ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ಮಾಡಿದ್ದೇವೆ. ನಿರ್ದೇಶನದ ಜತೆಗೆ ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದೇನೆ’ ಎಂದರು ನಿರ್ದೇಶಕ.

ಸೋನಲ್ ಮೊಂತೆರೋ ನಾಯಕಿ. ನವೆಂಬರ್ 21ರಂದು ಚಿತ್ರ ತೆರೆಗೆ ಬರಲಿದೆ. ‘ನನ್ನ ಸಿನಿ ಪಯಣದಲ್ಲಿ ಈ ಚಿತ್ರಕ್ಕೆ ವಿಶೇಷ ಜಾಗವಿದೆ. ನನಗೆ ವೇದಗುರು ಅವರೆ ಈ ಚಿತ್ರದ ಹೀರೊ ಎನ್ನಿಸುತ್ತಾರೆ. ಸಾಕಷ್ಟು ಕಷ್ಟಪಟ್ಟು ಚಿತ್ರವನ್ನು ಈ ಹಂತಕ್ಕೆ ತಂದಿದ್ದಾರೆ. ನಾನೂ ಒಬ್ಬ ನಿರ್ಮಾಪಕನಾಗಿದ್ದರಿಂದ ಅವರ ಕಷ್ಟ ಏನೆಂದು ಗೊತ್ತಾಗಿದೆ. ಕ್ರಿಮಿನಲ್ ಆಗಿ ಜೈಲಿನಲ್ಲಿರುವವನ ಪಾತ್ರದ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ನನ್ನ ಪಾತ್ರ ಸೈಕ್ ರೀತಿ ಇದೆ. ಇಂಥ ಪಾತ್ರ ನನಗೆ ಹೊಸದು’ ಎಂದರು ಅಜಯ್ ರಾವ್.

ವಿಯಾನ್(ಸ್ಯಾಂಡಿ) ಸಂಗೀತ ಸಂಯೋಜನೆ, ರಮ್ಮಿ ಛಾಯಾಚಿತ್ರಗ್ರಹಣ, ಸುರೇಶ್ ಆರ್ಮುಗಂ ಅವರ ಸಂಕಲನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.