ಶುಕ್ರವಾರ, ಸೆಪ್ಟೆಂಬರ್ 18, 2020
24 °C

ಹೊಸ ಹೇರ್‌ಸ್ಟೈಲ್‌ನಲ್ಲಿ ಅಜಿತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಲ್ಟ್ ಆ್ಯಂಡ್ ಪೆಪ್ಪರ್‌ ಕೂದಲ ವಿನ್ಯಾಸ ಮಾಡಿಸಿಕೊಂಡಿದ್ದ ನಟ ಅಜಿತ್‌ ಈಗ ತಮ್ಮ ಕೂದಲನ್ನು ಕಪ್ಪಾಗಾಗಿಸಿಕೊಂಡಿದ್ದಾರೆ. ಕಪ್ಪು– ಬಿಳುಪು ಕೂದಲ ವಿನ್ಯಾಸ ಮಾಡಿಕೊಂಡಿದ್ದ ಅವರು, ಹಾಗೇ ಸುಮಾರು ಸಿನಿಮಾಗಳಲ್ಲಿ ನಟಿಸಿದ್ದರು. ಅಜಿತ್‌ ಅವರಿಂದಾಗಿಯೇ ಈ ಕೂದಲ ವಿನ್ಯಾಸವೂ ಜನಪ್ರಿಯವಾಗಿತ್ತು.

ಈಗ ದಿಢೀರನೇ ಅಜಿತ್‌ ತಮ್ಮ ಕೂದಲನ್ನು ಕಪ್ಪಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ಅಜಿತ್‌ ಏರ್‌ಫೋರ್ಟ್‌ನಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ನೆರೆದಿದ್ದವರೆಲ್ಲರೂ ಅವರನ್ನು ಆಶ್ಚರ್ಯದಿಂದ ನೋಡುತ್ತಿದ್ದರು. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಅಜಿತ್‌ ತಮ್ಮ ಹೊಸ ಹೇರ್‌ಸ್ಟೈಲ್‌ನಲ್ಲಿ ಚಂದ ಕಾಣುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಕಮೆಂಟ್‌ ಮಾಡಿದ್ದಾರೆ.

ಈ ರೀತಿ ಕೂದಲ ವಿನ್ಯಾಸ ಬದಲಾವಣೆ ಮಾಡಿಕೊಂಡಿರುವುದು ಮುಂದಿನ ಚಿತ್ರಕ್ಕಾಗಿ ಎನ್ನಲಾಗಿದೆ. ಇದು ಅಜಿತ್‌ ಅಭಿನಯದ 60ನೇ ಸಿನಿಮಾ. ಇದಕ್ಕೆ ಟೈಟಲ್‌ ಇನ್ನೂ ಅಂತಿಮವಾಗಿಲ್ಲ. ಈ ಚಿತ್ರವನ್ನು ಎಚ್‌. ವಿನೋದ್‌ ನಿರ್ದೇಶಿಸುತ್ತಿದ್ದು, ಇದರಲ್ಲಿ ಅಜಿತ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ‘ಪಿಂಕ್‌’ ಚಿತ್ರದ ತಮಿಳು ರಿಮೇಕ್‌ ‘ನೇರ್ಕೊಂಡ ಪಾರ್ವೈ’ ಸಿನಿಮಾದಲ್ಲಿ ಅಜಿತ್‌ ಅಭಿನಯಿಸಿದ್ದರು. ಮೂಲ  ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಮಾಡಿದ ಪಾತ್ರವನ್ನು ಅಜಿತ್‌ ಮಾಡಿದ್ದರು. ಇದು ಕಾಲಿವುಡ್‌ನಲ್ಲಿ ಭಾರಿ ಹಿಟ್‌ ಆಗಿತ್ತು. ಈ ಚಿತ್ರವನ್ನು ಬೋನಿ ಕಪೂರ್‌ ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ: ಸಂಕ್ರಾಂತಿಗೆ ತಲಾ ವರ್ಸಸ್‌ ತಲೈವಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು