‘ಪ್ಯಾಟೇ ಹುಡ್ಗೀ ಹಳ್ಳಿ ಲೈಫು’ ಸೀಸನ್–3ರ ರಿಯಾಲಿಟಿ ಶೋ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಅಖಿಲಾ ಪ್ರಕಾಶ್, ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಶ್ರಮ ಹಾಕುತ್ತಿದ್ದಾರೆ. ಅವಕಾಶ ಸಿಕ್ಕಿದರೆಕಾಲಿವುಡ್‌ನಲ್ಲೂ ಒಂದು ಕೈ ನೋಡಿ ಬರುವ ಸುಳಿವು ನೀಡಿದ್ದಾರೆ. ಅವರು ನಾಯಕಿಯಾಗಿ ಅಭಿನಯಿಸಿದ‘ಓಳ್ ಮುನ್ಸಾಮಿ’, ‘ಸೋಜಿಗ’, ‘ಗಾಂಚಾಲಿ’, ‘ಕುಯುಕ್ತಿ’ ಸಿನಿಮಾಗಳು ಹೇಳಿಕೊಳ್ಳುವಂತಹ ಹೆಸರು ತಂದುಕೊಡದಿದ್ದರೂ, ಈ ವಾರ ತೆರೆಗೆ ಬರಲಿರುವ ‘ರತ್ನಮಂಜರಿ’ ಸಿನಿಮಾದ ಮೇಲೆ ಒಂದಿಷ್ಟು ಹೆಚ್ಚೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಈ ನಟಿ.

‘ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಆರಂಭದಲ್ಲಿ ‘ಡಿಂಪಲ್ ಕ್ವೀನ್’ ಎನ್ನುತ್ತಿದ್ದರು. ಈಗ ‘ಸ್ಮೈಲಿ ಕ್ವೀನ್’ ಟ್ಯಾಗ್‌ಲೈನ್ ಕೂಡ ಕೊಟ್ಟಿದ್ದಾರೆ’ ಎಂದು ನಗು ಚೆಲ್ಲುತ್ತಲೇ ‘ಸಿನಿಮಾ ಪುರಣವಣಿ’ಯೊಂದಿಗೆ ಮಾತು ಆರಂಭಿಸಿದರು ಅಖಿಲಾ.

ಎನ್‌ಆರ್‌ಐ ಪ್ರಸಿದ್ಧ ಅವರು ನಿರ್ದೇಶಿಸಿರುವ ‘ರತ್ನಮಂಜರಿ’ ಭವಿಷ್ಯದಲ್ಲಿ ತನಗೆ ಹೊಸ ಅವಕಾಶಗಳನ್ನು ಹೊತ್ತು ತರಲಿದೆ ಮತ್ತುತನ್ನ ಸಿನಿ ಕೆರಿಯರ್‌ಗೆ ಒಂದು ಬ್ರೇಕ್ ಸಹ ನೀಡಲಿದೆ ಎನ್ನುವುದು ಅಖಿಲಾ ಅವರ ಆಶಾಭಾವನೆ. ‘ಮೇ 16 ನನ್ನ ಬರ್ತಡೇ, ಮೇ 17ರಂದು ‘ರತ್ನಮಂಜರಿ’ ಬಿಡುಗಡೆ.ಡಬಲ್ ಧಮಾಕದ ಖುಷಿ ಸಿಗಬಹುದೆಂಬ ನಿರೀಕ್ಷೆ ನನ್ನದು.ಈ ಸಿನಿಮಾ ನನಗೆ ತುಂಬಾ ವಿಶೇಷ. ಏಕೆಂದರೆ ಈ ಸಿನಿಮಾಕ್ಕಾಗಿ ತುಂಬಾ ಹಾರ್ಡ್ ವರ್ಕ್ ಮಾಡಿದ್ದೀನಿ. ಒಬ್ಬ ಫ್ಯಾಷನ್ ಡಿಸೈನರ್ ಆಗಿರುವ ಮೂಗುಬೊಟ್ಟಿನ ‘ಗೌರಿ’ ಪಾತ್ರದಲ್ಲಿ ನಟಿಸಿದ್ದೇನೆ. ಅದು ಅಲ್ಲದೆ,ದೊಡ್ಡ ಬ್ಯಾನರ್‌ನಡಿ ನಿರ್ಮಾಣವಾಗಿರುವ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ ಸಂಭ್ರಮದಲ್ಲಿದ್ದೇನೆ ಎಂದು ಮಾತು ವಿಸ್ತರಿಸಿದರು ಈ ‘ಪ್ಯಾಟೆ ಹುಡ್ಗಿ’.

ಸಿನಿ ಕೆರಿಯರ್ ಶುರುವಿನಿಂದಲೂ ನಾನು ಒಳ್ಳೆಯಸಿನಿಮಾಗಳಲ್ಲೇ ನಟಿಸಿದ್ದೆ. ಆದರೆ, ಸರಿಯಾಗಿ ಮಾರ್ಕೆಟ್ ಮಾಡದೇಆ ಸಿನಿಮಾಗಳು ನಿರೀಕ್ಷಿತ ಯಶಸ್ಸು ತಂದುಕೊಡಲಿಲ್ಲವೆಂದು ಭಾವಿಸುತ್ತೇನೆ. ‘ರತ್ನಮಂಜರಿ’ ಸಿನಿಮಾ ಈಗಾಗಲೇ ಸಾಕಷ್ಟು ಪ್ರಚಾರ ಪಡೆದಿದೆ.ಸೋಷಿಯಲ್ ಮೀಡಿಯಾದಲ್ಲೂ ಸಿನಿ ರಸಿಕರಲ್ಲಿ ಕ್ರೇಜ್ ಹುಟ್ಟಿಸಿದೆ. ಸಿನಿಮಾದಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಇದೆ.ಒಂದು ಕೊಲೆ ಕೇಸಿನ ಪತ್ತೇದಾರಿಯ ನೈಜ ಘಟನೆಯಾಧಾರಿತ ಮೈನವಿರೇಳಿಸುವ ರೋಚಕ ಕಥಾನಕವಿದು. ಹಾಲಿವುಡ್ ತಂತ್ರಜ್ಞರು ಈ ಸಿನಿಮಾಕ್ಕಾಗಿ ತಮ್ಮ ಕೌಶಲ ಧಾರೆ ಎರೆದಿದ್ದಾರೆ.ಮಡಿಕೇರಿ, ಮಲೇಷ್ಯಾ, ಅಮೆರಿಕದಲ್ಲಿ ಶೂಟಿಂಗ್ ನಡೆದಿದ್ದು, ಸಿನಿಮಾದಲ್ಲಿ ಅದ್ದೂರಿತನದ ಕೊರತೆ ಇಲ್ಲವೆಂದುಅವರು ‘ರತ್ನಮಂಜರಿ’ಯ ಕಥಾಮಂಜರಿ ತೆರೆದಿಟ್ಟರು.

‘ಎನ್‌ಆರ್‌ಐಗಳೇ ಸೇರಿ ನಿರ್ಮಿಸಿರುವ ಸಿನಿಮಾ ಆಗಿರುವುದರಿಂದ ಕೆಲವು ಮಂದಿನನ್ನನ್ನೂಎನ್‌ಆರ್‌ಐ ಇರಬಹುದು ಅಂದುಕೊಂಡಿದ್ದಾರೆ. ನಮ್ಮ ಹುಟ್ಟೂರು ವಿರಾಜಪೇಟೆಯ ಕಡಂಗ. ತಂದೆ ಪ್ರಕಾಶ್ ಮೈಸೂರಿನಲ್ಲಿಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು,ಅಮ್ಮ ಶೋಭಾ ದೈಹಿಕ ಶಿಕ್ಷಣ ಶಿಕ್ಷಕಿ. ನಾನು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ವೈದ್ಯೆಯಾಗುವ ಕನಸು ಕಂಡಿದ್ದೆ. ರಿಯಾಲಿಟಿ ಶೋನಲ್ಲಿ ಟಾಪ್ ಐವರಲ್ಲಿ ಒಬ್ಬಳಾಗಿದ್ದುಬದುಕಿನ ಗುರಿಯನ್ನೇಬದಲಿಸಿ, ಸಿನಿಮಾ ರಂಗಕ್ಕೆ ಕರೆತಂದಿತು. ನಾಗತಿಹಳ್ಳಿ ಚಂದ್ರಶೇಖರ್ ಅವರ ಗರಡಿಯಲ್ಲಿ ಮತ್ತು ಅವರ ‘ಸಿನಿಮಾ ಟೆಂಟ್ ಶಾಲೆ’ಯಲ್ಲಿ ಅಭಿನಯದ ಗ್ರಾಮರ್‌ಕಲಿತಿದ್ದೇನೆ ಎನ್ನುತ್ತಾರೆ ಅಖಿಲಾ.

ಡಬ್ ಸ್ಮ್ಯಾಶ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿಗಮನ ಸೆಳೆದಿರುವ ಬಗ್ಗೆ ಮಾತು ಹೊರಳಿದಾಗ, ‘ಬಿಡುವಿನ ವೇಳೆಯಲ್ಲಿ ಟೈಮ್ ಪಾಸ್‌ಗಾಗಿ ಒಳ್ಳೆಯ ಹಾಡು, ಡೈಲಾಗ್‌ಗಳಿಗೆ ಡಬ್ ಸ್ಮ್ಯಾಶ್ ಮಾಡುತ್ತಿದ್ದೆ. ಈಗ ನಿಲ್ಲಿಸಿದ್ದೇನೆ’ ಎಂದರು.

ಮುಂದಿನ ಯೋಜನೆಗಳೇನು ಎಂದು ಕೇಳಿದರೆ, ‘ರತ್ನಮಂಜರಿ ಸಿನಿಮಾ ಮುಗಿಯುವವರೆಗೂ ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳಬಾರದೆಂಬ ಕರಾರಿಗೆ ಒಪ್ಪಿಕೊಂಡಿದ್ದೆ. ಹಾಗಾಗಿ ಸಿನಿಮಾ ಪೂರ್ಣವಾಗುವವರೆಗೆ ಹೊಸ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಈಗ ಒಂದು ತಮಿಳು ಮತ್ತು ಒಂದು ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿದೆ. ಇನ್ನೂ ಸ್ಕ್ರಿಪ್ಟ್ ನೋಡಿಲ್ಲ. ಅಭಿನಯಕ್ಕೆ, ಪ್ರತಿಭೆ ತೋರಿಸಲು ಅವಕಾಶವಿದ್ದು,ಸ್ಕ್ರಿಪ್ಟ್ ಚೆನ್ನಾಗಿದ್ದರೆ ಸಿನಿಮಾ ಒಪ್ಪಿಕೊಳ್ಳಲು ನಿರ್ಧರಿಸಿದ್ದೇನೆ’ ಎನ್ನುವ ಅಖಿಲಾ ಮಾತಿನಲ್ಲಿ ಪಕ್ಕಾ ಸಿನಿ ಲೆಕ್ಕಾಚಾರದ ನಡಿಗೆ ಕಾಣಿಸಿತು.

ಸಮಯ ಸಿಕ್ಕಾಗೆಲ್ಲ ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತೇನೆ. ಸ್ನೇಹಿತೆಯರೊಂದಿಗೆ ಟ್ರೆಕ್ಕಿಂಗ್ ಮಾಡುತ್ತೇನೆ ಎನ್ನುವ ಅಖಿಲಾ, ಟ್ರೆಕಿಂಗ್, ಪ್ರವಾಸದ ಬಗ್ಗೆ ತಮಗಿರುವ ಆಸಕ್ತಿ ಬಗ್ಗೆಯೂ ಹೇಳುವುದನ್ನು ಮರೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.